ಬೆಂಗಳೂರು: ಕೆಪಿಸಿಸಿ ( ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ) ಪ್ರಚಾರ ಸಮಿತಿಯ ವಿವಿಧ ಜವಾಬ್ದಾರಿ ಹಂಚಿಕೆ ಮಾಡಿ ಎಐಸಿಸಿ (ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ) ಆದೇಶ ಹೊರಡಿಸಿದೆ. ಅಖಿಲ ಕರ್ನಾಟಕ ಸಂಘಟನಾ ಸಹ ಅಧ್ಯಕ್ಷರಾಗಿ ಬಿ ಎಲ್ ಶಂಕರ್ ನೇಮಕಗೊಂಡಿದ್ದಾರೆ. ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ನೇಮಕಗೊಂಡ ಬಳಿಕ ಬಹುತೇಕ ಚಿತ್ರಕಲಾ ಪರಿಷತ್ತಿಗೆ ಹಾಗೂ ಅದರ ಚಟುವಟಿಕೆಗೆ ಸೀಮಿತರಾಗಿದ್ದ ಬಿ ಎಲ್ ಶಂಕರ್ ಮತ್ತೊಮ್ಮೆ ಪಕ್ಷದ ಕಾರ್ಯಕ್ರಮಕ್ಕೆ ನಿಯೋಜನೆಗೊಂಡಿದ್ದಾರೆ.
ಮುಂಬರುವ ದಿನಗಳಲ್ಲಿ ಹೊಸದಾಗಿ ನೇಮಕಗೊಂಡಿರುವ ಸದಸ್ಯರು ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಗೆ ಪ್ರಚಾರದ ವಿಚಾರವಾಗಿ ಇನ್ನಷ್ಟು ಬಲ ತುಂಬಲಿದ್ದಾರೆ.
ವಿಭಾಗವಾರು ಕೋ ಚೇರ್ ಮನ್ಗಳ ನೇಮಿಸಿ ಆದೇಶ ಮಾಡಲಾಗಿದ್ದು, ಕಲಬುರ್ಗಿ ವಿಭಾಗ- ಡಾ.ಶರಣಪ್ರಕಾಶ್ ಪಾಟೀಲ್, ಬೆಳಗಾವಿ ವಿಭಾಗ- ಸಂತೋಷ್ ಲಾಡ್, ಬೆಂಗಳೂರು ವಿಭಾಗ- ರಿಜ್ವಾನ್ ಅರ್ಷದ್, ಮೈಸೂರು ವಿಭಾಗ- ಡಾ. ಯತೀಂದ್ರ ಸಿದ್ದರಾಮಯ್ಯ, ಮಧ್ಯ ಕರ್ನಾಟಕ ವಿಭಾಗ- ಚಂದ್ರಪ್ಪ, ಕರಾವಳಿ ಕರ್ನಾಟಕ- ಮಂಜುನಾಥ್ ಭಂಡಾರಿ ಇವರಿಗೆ ಪ್ರಚಾರ ಸಮಿತಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಮುಖ್ಯ ಸಂಯೋಜಕರನ್ನಾಗಿ, ಶಕ್ತಿ ಬಂದಂತಾಗಿದೆ. ಪ್ರಸಾದ ಅಬ್ಬಯ್ಯ, ನಾಗೇಂದ್ರ, ಆನಂದ್ ನ್ಯಾಮಗೌಡ, ಡಾ. ಅಂಜಲಿ ನಿಂಬಾಲ್ಕರ್, ಸೌಮ್ಯ ರೆಡ್ಡಿ, ಲಕ್ಷ್ಮೀ ಹೆಬ್ಬಾಲ್ಕರ್, ರೂಪ ಶಶಿಧರ್, ಗಣೇಶ್ ಹುಕ್ಕೇರಿ, ಡಾ. ರಂಗನಾಥ್, ಪ್ರಕಾಶ್ ರಾಥೋಡ್, ಈ ಎಲ್ಲಾ ಶಾಸಕರನ್ನು ಮುಖ್ಯ ಸಂಯೋಜಕರನ್ನಾಗಿ ನೇಮಿಸಿದ್ದಾರೆ.