ಕರ್ನಾಟಕ

karnataka

ETV Bharat / state

ರಾತ್ರಿ ಬಂದ ಅದೊಂದು ಫೋನ್ ಕಾಲ್ ಬಿಎಸ್​ವೈ ಅಳಿದುಳಿದ ಕನಸನ್ನೂ ಕಮರಿಸಿತಾ? - ಬಿಎಸ್​ವೈ ವಿಧಾನಸೌಧದಲ್ಲಿ ಪದತ್ಯಾಗ

ಯಡಿಯೂರಪ್ಪ ಬುಲಾವ್ ಬರುತ್ತಿದ್ದಂತೆ ಬೆಳಗ್ಗೆಯೇ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹಾಗೂ ಎಜಿ ಪ್ರಭುಲಿಂಗ ನಾವಡಗಿ ಅವರು ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ಆಗಮಿಸಿದರು. ಇಬ್ಬರ ಜೊತೆಯೂ ಕೆಲಕಾಲ ಮಾತುಕತೆ ನಡೆಸಿದರು. ಆಡಳಿತಾತ್ಮಕ ನಿರ್ಧಾರಗಳ ಸಂಬಂಧ ಬಾಕಿ ಕಡತ ಇರುವ ಕುರಿತು ಮಾಹಿತಿ ಪಡೆದುಕೊಂಡರು. ರಾಜೀನಾಮೆ ನಂತರ ಕಾನೂನಾತ್ಮಕ ತೊಡಕುಗಳು ಸಂಭವಿಸುವ ಸಾಧ್ಯತೆ ಕುರಿತು ಸಮಾಲೋಚನೆ ನಡೆಸಿದರು..

BS Y
ಬಿಎಸ್​ವೈ

By

Published : Jul 26, 2021, 6:58 PM IST

ಬೆಂಗಳೂರು :ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮಾನಸಿಕವಾಗಿ ಸಿದ್ದರಾಗಿದ್ದ ಯಡಿಯೂರಪ್ಪಗೆ ಬಂದ ಅದೊಂದು ಫೋನ್ ಕಾಲ್, ಉಳಿದಿದ್ದ ಆಸೆಯನ್ನೂ ಕಮರುವಂತೆ ಮಾಡಿತು. ಹೀಗಾಗಿಯೇ, ವಿದಾಯದ ಭಾಷಣದೊಂದಿಗೆ ಬಿಎಸ್​ವೈ ವಿಧಾನಸೌಧಕ್ಕೆ ಬಂದು ಪದತ್ಯಾಗ ಮಾಡಿದರು.

ಯಡಿಯೂರಪ್ಪ ದೆಹಲಿ ಭೇಟಿ ವೇಳೆಯಲ್ಲಿಯೇ ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚಿಸಿತ್ತು. ರಾಜೀನಾಮೆ ನೀಡುವ ಕುರಿತು ಜುಲೈ 25ರಂದು ಸೂಚನೆ ನೀಡುವುದಾಗಿ ತಿಳಿಸಿ ವಾಪಸ್ ಕಳಿಸಿತ್ತು. ಅದನ್ನು ಯಡಿಯೂರಪ್ಪ ಬಹಿರಂಗವಾಗಿಯೇ ಹೇಳಿದ್ದರು.

ಅದರಂತೆ ಮಾನಸಿಕವಾಗಿ ಸಿದ್ಧತೆ ಮಾಡಿಕೊಂಡಿದ್ದ ಬಿಎಸ್​ವೈ, ಕೆಲ ದಿನಗಳಿಂದ ಮೌನಕ್ಕೆ ಶರಣಾಗಿದ್ದರು. ಕಡೆ ಕ್ಷಣದಲ್ಲಿ ಮತ್ತಷ್ಟು ಸಮಯಾವಕಾಶ ಸಿಗಬಹುದು ಎನ್ನುವ ಸಣ್ಣ ನಿರೀಕ್ಷೆ, ಆಸೆ ಇರಿಸಿಕೊಂಡಿದ್ದರು. ಆದರೆ, ಕಳೆದ ರಾತ್ರಿ ಬಂದ ದೂರವಾಣಿ ಕರೆ ಆ ಆಸೆಯೂ ಕಮರುವಂತೆ ಮಾಡಿತು.

ರಾತ್ರಿ 11.30ಕ್ಕೆ ಹೈಕಮಾಂಡ್​ನಿಂದ ಬಂದ ದೂರವಾಣಿ ಕರೆ ನಾಳೆ ರಾಜೀನಾಮೆ ನೀಡಬೇಕು ಎನ್ನುವ ಸ್ಪಷ್ಟ ಸೂಚನೆ ನೀಡಿತು ಎಂದು ಸಿಎಂ ಕಚೇರಿ ಆಪ್ತ ಮೂಲಗಳು ತಿಳಿಸಿವೆ. ಹೈಕಮಾಂಡ್ ಸೂಚನೆ ಬರುತ್ತಿದ್ದಂತೆ ರಾಜೀನಾಮೆಗೆ ಸಿದ್ಧರಾದ ಯಡಿಯೂರಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯದ ಅಡ್ವೊಕೇಟ್ ಜನರಲ್‌ಗೆ ಬುಲಾವ್ ನೀಡಿದರು.

ಯಡಿಯೂರಪ್ಪ ಬುಲಾವ್ ಬರುತ್ತಿದ್ದಂತೆ ಬೆಳಗ್ಗೆಯೇ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹಾಗೂ ಎಜಿ ಪ್ರಭುಲಿಂಗ ನಾವಡಗಿ ಅವರು ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ಆಗಮಿಸಿದರು. ಇಬ್ಬರ ಜೊತೆಯೂ ಕೆಲಕಾಲ ಮಾತುಕತೆ ನಡೆಸಿದರು. ಆಡಳಿತಾತ್ಮಕ ನಿರ್ಧಾರಗಳ ಸಂಬಂಧ ಬಾಕಿ ಕಡತ ಇರುವ ಕುರಿತು ಮಾಹಿತಿ ಪಡೆದುಕೊಂಡರು. ರಾಜೀನಾಮೆ ನಂತರ ಕಾನೂನಾತ್ಮಕ ತೊಡಕುಗಳು ಸಂಭವಿಸುವ ಸಾಧ್ಯತೆ ಕುರಿತು ಸಮಾಲೋಚನೆ ನಡೆಸಿದರು ಎಂದು ತಿಳಿದು ಬಂದಿದೆ.

ಬಿ ಎಸ್​ ಯಡಿಯೂರಪ್ಪ ಕೈಯಿಂದಲೇ ಕಾಫೀ ಟೇಬಲ್ ಬುಕ್ ಬಿಡುಗಡೆ

ಅಭಿನಂದಿಸಿದ ಬಸವರಾಜ ಬೊಮ್ಮಾಯಿ : ಸಿಎಂ ಅಧಿಕೃತ ನಿವಾಸ ಕಾವೇರಿಗೆ ಸಿಎಸ್ ಹಾಗೂ ಎಜಿ ಬಂದಿದ್ದು ಗೊತ್ತಾಗುತ್ತಿದ್ದಂತೆ, ಯಡಿಯೂರಪ್ಪ ರಾಜೀನಾಮೆ ಖಚಿತ ಎನ್ನುವುದನ್ನು ಅರಿತ ಆಪ್ತರು ಕಾವೇರಿಗೆ ಆಗಮಿಸಿ ಮಾತುಕತೆ ನಡೆಸಿದರು. ಮುಖ್ಯಮಂತ್ರಿಯಾಗಿ ಯಶಸ್ವಿ ಎರಡು ವರ್ಷಗಳ ಅವಧಿ ಪೂರೈಸಿರುವುದಕ್ಕೆ ಅಭಿನಂದಿಸಿದ ಬಸವರಾಜ ಬೊಮ್ಮಾಯಿ ನಂತರ ರಾಜಕೀಯ ವಿಷಯದ ಕುರಿತು ಮಾತುಕತೆ ನಡೆಸಿದರು. ದೂರವಾಣಿ ಕರೆ ಬಂದ ಮಾಹಿತಿ ಹಂಚಿಕೊಂಡರು.

ಸಿಎಂ ಬಿಎಸ್​ವೈ ಅವರನ್ನು ಅಭಿನಂದಿಸಿದ ಬಸವರಾಜ ಬೊಮ್ಮಾಯಿ

ಯಡಿಯೂರಪ್ಪ ಕೈಯಿಂದಲೇ ಬಿಡುಗಡೆ : ಸಿಎಂ ರಾಜೀನಾಮೆ ವಿಷಯ ಖಚಿತವಾಗುತ್ತಿದ್ದಂತೆ ತರಾತುರಿಯಲ್ಲಿಯೇ ಗೃಹ ಇಲಾಖೆಯ ಎರಡು ವರ್ಷಗಳ ಸಾಧನೆಯ ವಿವರ ಹೊಂದಿದ ಕಾಫೀ ಟೇಬಲ್ ಬುಕ್ ಅನ್ನು ಯಡಿಯೂರಪ್ಪ ಕೈಯಿಂದಲೇ ಬಿಡುಗಡೆ ಮಾಡಿಸಿದರು.

ಓದಿ:ಆರ್​ಟಿಇ 2ನೇ ಸುತ್ತಿನ ಆನ್‌ಲೈನ್‌ ಲಾಟರಿ ಪ್ರಕ್ರಿಯೆ: ಉಳಿಕೆಯಾಯ್ತು 6 ಸಾವಿರಕ್ಕೂ ಹೆಚ್ಚು ಸೀಟು

ABOUT THE AUTHOR

...view details