ಕರ್ನಾಟಕ

karnataka

ಮುಂದಿನ ಐದು ದಿನ ರಾಜ್ಯದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

By

Published : Jul 16, 2020, 6:38 PM IST

ಕರಾವಳಿ ಜಿಲ್ಲೆಗಳಿಗೆ ಜುಲೈ ಇಂದಿನಿಂದ 20ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ತಜ್ಞ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ.

rain
rain

ಬೆಂಗಳೂರು: ಪೂರ್ವ ಅರಬ್ಬೀ ಸಮುದ್ರದ ಕರಾವಳಿ ಪ್ರದೇಶದಲ್ಲಿ ಟ್ರಫ್ ಇರುವುದರಿಂದ ಕರಾವಳಿ ಜಿಲ್ಲೆಗಳಿಗೆ ಜುಲೈ 16(ಇಂದಿನಿಂದ) ಜು. 20ರವರೆಗೆ ಭಾರೀ ಮಳೆಯಾಗಲಿದೆ.

ಜುಲೈ 16,17 ಹಾಗೂ 20ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡಕ್ಕೆ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜುಲೈ 18,19 ರಂದು ಈ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ತಜ್ಞ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.

ಮುಂದಿನ ಐದು ದಿನ ರಾಜ್ಯಕ್ಕೆ ಉತ್ತಮ ಮಳೆ

ಉತ್ತರ ಒಳನಾಡಿನಲ್ಲಿ ಇಂದು ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಬಹುದು. 17, 18ರಂದು ಮಳೆ ತೀವ್ರತೆ ಕಡಿಮೆಯಾಗಲಿದೆ. ಜುಲೈ 19ರಂದು ಬೀದರ್, ಕಲಬುರಗಿಯಲ್ಲಿ ಭಾರೀ ಸುರಿಯಲಿದೆ. ಜುಲೈ 19, 20ರಂದು ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಜುಲೈ 16, 19 ಹಾಗೂ 20ರಂದು ಹೆಚ್ಚಿನ ಮಳೆಯಾಗಲಿದ್ದು, ಜುಲೈ 17, 18 ರಂದು ಬಹುತೇಕ ಎಲ್ಲಾ ಜಿಲ್ಲೆಗಳಿಗೆ ಮಳೆ ಬೀಳಲಿದೆ. ಜುಲೈ 16,18, 19 ಹಾಗೂ 20ರಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಜುಲೈ 16, 17ರಂದು ಹಗುರದಿಂದ ಕೂಡಿ ಸಾಧಾರಣ ಮಳೆಯಾಗಲಿದೆ. ಇಂದು ಕೂಡಾ ಬೆಂಗಳೂರಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನ ಸಂಜೆ ವೇಳೆಗೆ ಹಗುರವಾಗಿ ಮಳೆಯಾಗಿದೆ.

ಇಂದು ರಾಜ್ಯಾದ್ಯಂತ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ 10 ಸೆಂಟಿ ಮೀಟರ್, ಶಿರಾ 9, ಕುಂದಾಪುರ, ಕೊಲ್ಲೂರು, ಹೊನ್ನಾವರದಲ್ಲಿ 8 ಸೆಂ.ಮೀ, ಮಾಣಿ- ಮಂಗಳೂರಿನಲ್ಲಿ 7 ಸೆಂ.ಮೀ, ಕಲಬುರಗಿ 10 ಸೆಂ.ಮೀ, ಆಗುಂಬೆಯಲ್ಲಿ 14 ಸೆಂಟಿ ಮೀಟರ್ ಮಳೆಯಾಗಿದೆ ಎಂದು ಸಿ ಎಸ್ ಪಾಟೀಲ್ ವಿವರಿಸಿದರು.

ABOUT THE AUTHOR

...view details