ಬೆಂಗಳೂರು: ಉದ್ಯಾನನಗರಿಗೆ ಬೆಳ್ಳಂಬೆಳಗ್ಗೆ ವರುಣ ಎಂಟ್ರಿ ಕೊಟ್ಟಿದ್ದು, ಮುಂಜಾನೆ 6 ಗಂಟೆಯಿಂದಲೇ ಮಳೆರಾಯನ ಆರ್ಭಟ ಜೋರಾಗಿದೆ.
ನಗರದ ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಮೈಸೂರು ಸರ್ಕಲ್, ಕೆ ಆರ್ ಮಾರುಕಟ್ಟೆ ಸುತ್ತಮುತ್ತಲಿನ ಭಾಗದಲ್ಲಿ ಬಿಟ್ಟುಬಿಟ್ಟು ಜೋರು ಮಳೆಯಾಗುತ್ತಿದ್ದರೆ, ಇತ್ತ ಯಶವಂತಪುರ ಭಾಗದಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ.
ವಾರದ ಮೊದಲ ದಿನವಾದ ಕಾರಣ ಕೆಲಸಕ್ಕೆ ಹೋಗುವ ನೌಕರರಿಗೆ ಮಳೆರಾಯ ಕಿರಿಕಿರಿ ಮಾಡಿದ್ದಾನೆ. ಸೋಮವಾರವಾದ್ದರಿಂದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ವರುಣನ ಸಿಂಚನ ಬೆಂಗಳೂರಿನಲ್ಲಿ ಈ ವಾರವೆಲ್ಲ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಲ್ಲತ್ತಹಳ್ಳಿಯ ಶ್ರೀಹರಿ ಹಾಗೂ ಸಿದ್ದಿನ್ ಅಪಾರ್ಟ್ಮೆಂಟ್ಗಳಿಗೆ ಮಳೆ ನೀರು ನುಗ್ಗಿದ್ದು, ರಸ್ತೆಗಳೆಲ್ಲ ಜಲಾವೃತಗೊಂಡ ದೃಶ್ಯ ಕಂಡು ಬಂತು.