ಕರ್ನಾಟಕ

karnataka

ETV Bharat / state

ಸಿಲಿಕಾನ್​ ಸಿಟಿಯಲ್ಲಿ ಬೃಹತ್ ಆರೋಗ್ಯ ಮೇಳ: ಉಚಿತವಾಗಿ ಔಷಧಿ ವಿತರಣೆ - kannadanews

ಶ್ರೀದೇವಿ ಚಾಮುಂಡೇಶ್ವರಿ ಹಾಗೂ ಶ್ರೀದೇವಿ ದೊಡ್ಡಮ್ಮತಾಯಿ ಟ್ರಸ್ಟ್ 3ನೇ ವಾರ್ಷಿಕೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಬೃಹತ್ ಆರೋಗ್ಯಮೇಳ ಹಮ್ಮಿಕೊಳ್ಳಲಾಗಿತ್ತು.

ಸಿಲಿಕಾನ್​ ಸಿಟಿಯಲ್ಲಿ ಬೃಹತ್ ಆರೋಗ್ಯ ಮೇಳ

By

Published : Jun 30, 2019, 9:48 AM IST

ಬೆಂಗಳೂರು:ನಗರದ ತರಬನಹಳ್ಳಿಯಲ್ಲಿ ಶ್ರೀದೇವಿ ಚಾಮುಂಡೇಶ್ವರಿ ಹಾಗೂ ಶ್ರೀದೇವಿ ದೊಡ್ಡಮ್ಮತಾಯಿ ಟ್ರಸ್ಟ್ 3ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ 'ಬೃಹತ್ ಆರೋಗ್ಯ ಮೇಳ'ದಲ್ಲಿ ಸಾವಿರಾರು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಗೆಜ್ಜಗಾರರಕುಪ್ಪೆ ಮುರಾರಿಸ್ವಾಮಿ ಪುಣ್ಯಕ್ಷೇತ್ರದ ಪೀಠಾಧಿಪತಿ ಡಾ.ಕುಮಾರಸ್ವಾಮಿ ಸ್ವಾಮೀಜಿ ಬೃಹತ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿದರು. ತರಬನಹಳ್ಳಿ ಸುತ್ತಮುತ್ತಲ ಜನರು ಬೆಳಗ್ಗೆ 9ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಆರೋಗ್ಯ ತಪಾಸಣೆ ಮಾಡಿಸಿಕೊಂಡು ನಾನಾ ಖಾಯಿಲೆಗಳಿಗೆ ಔಷಧಿ ಪಡೆದರು.ಕಾರ್ಯಕ್ರಮದಲ್ಲಿ ಸುಮಾರು 300 ಶಾಲಾವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ 200ಕ್ಕೂ ಹೆಚ್ಚು ಜನರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಸಿಲಿಕಾನ್​ ಸಿಟಿಯಲ್ಲಿ ಬೃಹತ್ ಆರೋಗ್ಯ ಮೇಳ

ಈ ಬೃಹತ್ ಆರೋಗ್ಯ ಶಿಬಿರದಲ್ಲಿ ಹೃದಯ, ಕಿಡ್ನಿಕಲ್ಲು, ಹಾಗೂ ಸಾಮಾನ್ಯ ಚಿಕಿತ್ಸಾ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣಾ ಶಿಬಿರ, ಉಚಿತ ಕನ್ನಡಕಗಳ ವಿತರಣೆ, ಅನ್ನದಾನ ಸೇರಿದಂತೆ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಹಾಗೂ ಬ್ಯಾಗ್ ವಿತರಣೆ ಮಾಡಲಾಗುತ್ತಿದೆ ಎಂದು ಡಾಕ್ಟರ್ ಕುಮಾರಸ್ವಾಮಿ ಸ್ವಾಮೀಜಿ ಶ್ರೀ ಮುರಾರಿ ಸ್ವಾಮಿ ಹೇಳಿದರು.ಇದೇ ವೇಳೆ ಶ್ರೀದೇವಿ ಚಾಮುಂಡೇಶ್ವರಿ ಹಾಗೂ ಶ್ರೀದೇವಿ ದೊಡ್ಡಮ್ಮತಾಯಿ ಟ್ರಸ್ಟ್ ದರ್ಮದರ್ಶಿ ನಾಗರಾಜ ಸ್ವಾಮೀಜಿ, ಎಸಿಪಿ ನಾಗರಾಜ್, ಆಹಾರ ಇಲಾಖೆ ಅಪಾರ ನಿರ್ದೇಶಕರಾದ ಸುಜಾತ ಸೇರಿದಂತೆ ಇನ್ನಿತರರು ಹಾಜರಿದ್ದರು.

For All Latest Updates

ABOUT THE AUTHOR

...view details