ಬೆಂಗಳೂರು: ವನ್ಯಜೀವಿ ನೋಡಲು ಬಂದ ತಕ್ಷಣ ಜನ ಇವರಿಗೆ ಮತ ಒತ್ತಿ ಬಿಡ್ತಾರಾ? ಎಂದು ಮಾಜಿ ಸಿಎಂ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಸಫಾರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಬಂಡೀಪುರ ಫಾರೆಸ್ಟ್ ಸಫಾರಿ ಕುರಿತು ಪ್ರತಿಕ್ರಿಯಿಸಿ, "ಪ್ರವಾಹ ಬಂದಾಗ, ಕೋವಿಡ್ ಅನಾಹುತದಿಂದ ಜನ ಬೀದಿಗೆ ಬಂದಾಗ ಇವರು ಬರಲಿಲ್ಲ. ಇವತ್ತು ಸಫಾರಿ ಮಾಡಲು ಬಂದಿದ್ದಾರೆ. ವನ್ಯಜೀವಿಗಳನ್ನ ರಕ್ಷಣೆ ಮಾಡಬೇಕು ನಿಜ. ಆದರೆ, ಮಾನವರ ರಕ್ಷಣೆಯನ್ನು ಮಾಡಬೇಕಲ್ವಾ" ಎಂದು ಪ್ರಶ್ನಿಸಿದ್ದಾರೆ.
ವನ್ಯ ಜೀವಿಗಳಿಂದ ದಾಳಿಗೊಳಗಾದ ಕುಟುಂಬ ಭೇಟಿ ಮಾಡಿದ್ರಾ- ಹೆಚ್ ಡಿಕೆ ಪ್ರಶ್ನೆ.. ವನ್ಯಜೀವಿಗಳಿಂದ ಎಷ್ಟು ದಾಳಿ ಆಗಿದೆ?, ಎಷ್ಟು ಜೀವ ಹಾನಿ ಆಗಿದೆ?, ದಾಳಿಗೆ ಒಳಗಾದ ಯಾವುದಾದರೂ ಒಂದು ಕುಟುಂಬವನ್ನು ಭೇಟಿ ಮಾಡಿದ್ರಾ?, ವನ್ಯಜೀವಿ ದಾಳಿಗೆ ಒಳಗಾದ ಕುಟುಂಬದ ಪರಿಸ್ಥಿತಿ ಏನಾಗಿದೆ?, ಕೂಲಿಂಗ್ ಗ್ಲಾಸ್, ಸೂಟು - ಬೂಟು ಹಾಕೊಂಡು ಬಂದ್ರೆ ಆಗುತ್ತಾ? ಎಂದು ಹೆಚ್ಡಿಕೆ ಕಿಡಿಕಾರಿದ್ದಾರೆ.
ಅರಣ್ಯ ಭಾಗದಲ್ಲಿ ಪೌಷ್ಟಿಕಾಂಶ, ಆಹಾರದ ಕೊರತೆ ಇದೆ ಅಂತ ವರದಿ ನೀಡಿದ್ದಾರೆ. ಅದರ ಬಗ್ಗೆ ಇವರಿಗೆ ಗಮನ ಹರಿಸಲು ಆಗಲ್ಲ. ನಾಡಿನ ಜನತೆ ಇದನ್ನು ಅರ್ಥ ಮಾಡಿಕೊಳ್ಳಬೇಕು. ವನ್ಯಜೀವಿಗಳನ್ನು ನೋಡಲು ಬಂದ ತಕ್ಷಣ ಇವರಿಗೆ ಮತದಾರರು ಓಟು ಒತ್ತಿ ಬಿಡ್ತಾರಾ ಎಂದು ಮೋದಿ ಮೈಸೂರು ಪ್ರವಾಸದ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ :ಹುಲಿ ಗಣತಿ ವರದಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ: ದೇಶದಲ್ಲಿರುವ ಹುಲಿಗಳ ನಿಖರ ಸಂಖ್ಯೆ ಬಹಿರಂಗ