ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೆಂದ್ರ ಹೆಗ್ಗಡೆ ಅವರಿಗೆ ಜನ್ಮ ದಿನದ ಶುಭಾಶಯಗಳನ್ನು ಕೋರಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೆಂದ್ರ ಹೆಗ್ಗಡೆ ಜನ್ಮದಿನಕ್ಕೆ ಶುಭ ಕೋರಿದ ಹೆಚ್ಡಿಡಿ - ಡಾ ಡಿ ವೀರೆಂದ್ರ ಹೆಗ್ಗಡೆ ಜನ್ಮದಿನ
ಇಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೆಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಸಂಭ್ರಮ. ಈ ಹಿನ್ನೆಲೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಶುಭಾಶಯ ಕೋರಿದ್ದಾರೆ. ಈ ಸಮಾಜದ ಜನತೆಗೆ ಆದರ್ಶಪ್ರಾಯವಾಗಿರುವ ಶ್ರೀಯುತರ ಮಾರ್ಗದರ್ಶನ ಇನ್ನಷ್ಟು ಕಾಲ ಸದಾ ಹೀಗೆ ಇರಲಿ ಎಂದು ಆಶಿಸಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೆಂದ್ರ ಹೆಗ್ಗಡೆ ಜನ್ಮದಿನಕ್ಕೆ ಶುಭಕೋರಿದ ಹೆಚ್ಡಿಡಿ
ಇಂದು ನಮ್ಮೆಲ್ಲರಿಗೂ ಶುಭದಿನ ಎಂದು ಭಾವಿಸುತ್ತೇನೆ. ಶ್ರೀಯುತರು ತಮ್ಮ ಜನಪರ ಸೇವಾ, ಧಾರ್ಮಿಕ ಸೇವಾ ಹಾಗೂ ಶಿಕ್ಷಣ ಕ್ಷೇತ್ರದ ಸೇವಾ ಕಾರ್ಯದಿಂದ ವಿಶ್ವದಲ್ಲೇ ಖ್ಯಾತಿ ಗಳಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳವು ಶ್ರೀಯುತರ ಸೇವಾ ಮನೋಭಾವದಿಂದ ಇಡೀ ದೇಶದಲ್ಲೇ ಪ್ರಮುಖ ಧಾರ್ಮಿಕ ಯಾತ್ರಾ ಸ್ಥಳವಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದ್ದಾರೆ.
ಈ ಸಮಾಜದ ಜನತೆಗೆ ಆದರ್ಶಪ್ರಾಯವಾಗಿರುವ ಶ್ರೀಯುತರ ಮಾರ್ಗದರ್ಶನ ಇನ್ನಷ್ಟು ಕಾಲ ಸದಾ ಹೀಗೆ ಇರಲಿ ಎಂದು ದೇವೇಗೌಡರು ಆಶಿಸಿದ್ದಾರೆ.