ಕರ್ನಾಟಕ

karnataka

ETV Bharat / state

ಅರುಣ್ ಸಿಂಗ್ ಭೇಟಿ ಬೆನ್ನಲ್ಲೇ ಬಿಎಸ್​ವೈ ವಿರುದ್ಧ ಹೆಚ್​ ವಿಶ್ವನಾಥ್​​​​ ಭ್ರಷ್ಟಾಚಾರ ಆರೋಪ

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಭೇಟಿ ನೀಡಿ ಬಿಜೆಪಿ ಭಿನ್ನರ ಬಂಡಾಯ ಶಮನಕ್ಕೆ ಮುಂದಾದ ಬೆನ್ನಲ್ಲೇ ವಿಧಾನ ಪರಿಷತ್ ಸದಸ್ಯ ಹೆಚ್​ ವಿಶ್ವನಾಥ್​ ಹೊಸ ಬಾಂಬ್​ ಸಿಡಿಸಿದ್ದಾರೆ. ಸಿಎಂ ವಿರುದ್ಧವೇ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಬಿಎಸ್​​ವೈ ಪುತ್ರ ಎಲ್ಲಾ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

h-vishwnath
ಹೆಚ್​ ವಿಶ್ವನಾಥ್​​​​

By

Published : Jun 17, 2021, 3:06 PM IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​​​ ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ.

ನಗರದ ಜಗನ್ನಾಥ್​ ಭವನದಲ್ಲಿ ಮಾತನಾಡಿದ ಅವರು, ನೀರಾವರಿ ಇಲಾಖೆಯಲ್ಲಿ 20 ಸಾವಿರ ಕೋಟಿ ಟೆಂಡರ್ ಕರೆದಿದ್ದಾರೆ. ಇದಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ಪಡೆದಿಲ್ಲ, ನೀರಾವರಿ ನಿಗಮಗಳ ಒಪ್ಪಿಗೆ ಪಡೆದಿಲ್ಲ. ಇದ್ರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.

ಅರುಣ್ ಸಿಂಗ್ ಭೇಟಿ ಬೆನ್ನಲ್ಲೇ ಸಿಎಂ ವಿರುದ್ಧ ಹೆಚ್​ ವಿಶ್ವನಾಥ್​​​​ ಭ್ರಷ್ಟಾಚಾರ ಆರೋಪ

ಜಿಂದಾಲ್​ ಕಂಪನಿಗೆ ಭೂಮಿ ಪರಭಾರೆಯಲ್ಲೂ ಭ್ರಷ್ಟಾಚಾರ ನಡೆದಿದೆ, ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬಳಿ ಹೇಳಿದ್ದೇನೆ. ನಾಯಕತ್ವ ಬದಲಾವಣೆ ಆಗಬೇಕಿದೆ, ನಾಯಕತ್ವ ಬದಲಾವಣೆಗೆ ಕಾರಣ ಕೊಟ್ಟಿದ್ದೇನೆ ಎಂದು ಹೆಚ್​ ವಿಶ್ವನಾಥ್ ಹೇಳಿದರು.

ಓದಿ:ನಾಯಕತ್ವ ಗೊಂದಲ ಬೀದಿಯಲ್ಲಿ ಬಗೆಹರಿಸುವ ವಿಚಾರ ಅಲ್ಲ: ಸಿ.ಟಿ.ರವಿ

For All Latest Updates

ABOUT THE AUTHOR

...view details