ಬೆಂಗಳೂರು:ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧದ ಶಾಸಕರ ಭವನ ಪ್ರವೇಶದ್ವಾರದ ಮುಂಭಾಗ ಹೂಡಿಕೆದಾರರು ಧರಣಿ ನಡೆಸಿದರು.
ಪ್ರತಿಭಟನಾನಿರತರು ಪೊಲೀಸ್ ವಶಕ್ಕೆ:
ಹೂಡಿಕೆದಾರರು ಬಿತ್ತಿಪತ್ರ ಹಿಡಿದು ಸಿಐಡಿ ಕಚೇರಿ ರಸ್ತೆಯಿಂದ ವಿಧಾನಸೌಧದವರೆಗೆ ವಿಧಾನಸೌಧ ಚಲೋ ನಡೆಸಿದರು. ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತ ಸೆಕ್ಷನ್ 144 ಜಾರಿಯಾಗಿದೆ. ಹೀಗಾಗಿ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಲಿಲ್ಲ. ನಾವು ಸರ್ಕಾರಕ್ಕೆ ವಿಧಾನಸೌಧ ಪ್ರವೇಶಿಸಿ ಮನವಿ ಸಲ್ಲಿಸುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದಾಗ ಹಿರಿಯ ನಾಗರಿಕರಸಮೇತ ಎಲ್ಲರನ್ನು ಪೊಲೀಸರು ವಶಕ್ಕೆ ಪಡೆದರು.