ಕರ್ನಾಟಕ

karnataka

ETV Bharat / state

ರಾಜ್ಯಪಾಲರದ್ದು ಕಟ್‌ ಅಂಡ್‌ ಪೇಸ್ಟ್‌ ಭಾಷಣ : ಶಾಸಕ ಹೆಚ್ ಕೆ ಪಾಟೀಲ್ - ಮಾಜಿ ಸಚಿವ ಹೆಚ್.ಕೆ.ಪಾಟೀಲ್​​ ಹೇಳಿಕೆ

ನೀರಾವರಿ ಯೋಜನೆಗಳ ಬಗ್ಗೆ ಇಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಮಾಡಬೇಕು. ಆಲಮಟ್ಟಿ ನೀರನ್ನ ಸದ್ಬಳಕೆ ಮಾಡಿಕೊಳ್ಳಬೇಕು. ಎಲ್ಲಿಯೂ ಅದರ ಬಗ್ಗೆ ವಿಸ್ತಾರವಾಗಿ ಹೇಳಿಲ್ಲ..

HK Patil
ಹೆಚ್.ಕೆ.ಪಾಟೀಲ್

By

Published : Feb 14, 2022, 1:08 PM IST

ಬೆಂಗಳೂರು : ರಾಜ್ಯಪಾಲರ ಭಾಷಣ ರಾಜ್ಯದ ಜನತೆಗೆ ನಿರಾಶೆ ತಂದಿದೆ ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯಪಾಲರದ್ದು ಕಟ್‌ ಅಂಡ್‌ ಪೇಸ್ಟ್‌ ಭಾಷಣ ಎಂದಿರುವ ಮಾಜಿ ಶಾಸಕ ಹೆಚ್ ಕೆ ಪಾಟೀಲ್

ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಭಾಷಣದಲ್ಲಿ ಮೂಲ ಉದ್ದೇಶವೇ ಇರಲಿಲ್ಲ. ಬೊಮ್ಮಾಯಿ ಸರ್ಕಾರ ಅಗೌರವ ತೋರಿದೆ. ಭಾಷಣದಲ್ಲಿ ಹೊಸತನವಿಲ್ಲ. ರಾಜ್ಯದ ಸಾಧನೆಯ ಬಗ್ಗೆ ಏನೇನೂ ಇಲ್ಲ. ಅಧಿಕಾರಿಗಳು ಕೊಟ್ಟಿದ್ದನ್ನ ಕಟ್ ಅಂಡ್‌ ಪೇಸ್ಟ್ ಮಾಡಿದ್ದಾರೆ ಎಂದು ಕಿಡಿ ಕಾರಿದರು.

ನೀರಾವರಿ ಯೋಜನೆಗಳ ಬಗ್ಗೆ ಇಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಮಾಡಬೇಕು. ಆಲಮಟ್ಟಿ ನೀರನ್ನ ಸದ್ಬಳಕೆ ಮಾಡಿಕೊಳ್ಳಬೇಕು. ಎಲ್ಲಿಯೂ ಅದರ ಬಗ್ಗೆ ವಿಸ್ತಾರವಾಗಿ ಹೇಳಿಲ್ಲ.

ಮಹದಾಯಿ, ಮೇಕೆದಾಟು ಬಗ್ಗೆ ರಸ್ತೆಗಳಲ್ಲಿ ಚರ್ಚೆಯಾಗಿದೆ. ಆದರೆ, ರಾಜ್ಯಪಾಲರ ಭಾಷಣದಲ್ಲಿ ಆ ವಿಚಾರವಿಲ್ಲ. ಜನರ ಚಿಂತನೆಗಳನ್ನ ಅಲಕ್ಷಿಸಿದೆ ಎಂದು ಹೆಚ್ ಕೆ ಪಾಟೀಲರು ವಿರೋಧ ವ್ಯಕ್ತಪಡಿಸಿದರು.

ಇದನ್ನೂ ಓದಿ:ಜಂಟಿ ಅಧಿವೇಶನಕ್ಕಾಗಿ ಗ್ರ್ಯಾಂಡ್ ಸ್ಟೆಪ್ಸ್ ಮೂಲಕ ವಿಧಾನಸೌಧಕ್ಕೆ ರಾಜ್ಯಪಾಲರ ಪ್ರವೇಶ

ABOUT THE AUTHOR

...view details