ಬೆಂಗಳೂರು: ಇನಾಂ ಜಮೀನು ಕಾಯ್ದೆ ತಿದ್ದುಪಡಿಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 70 ಸಾವಿರ ಎಕರೆ ಜಮೀನು ಇನಾಂ ವ್ಯಾಪ್ತಿಯಲ್ಲಿ ಇದೆ. ರಾಜ ಮಹಾರಾಜರ ಕಾಲದಲ್ಲಿ, ಬ್ರಿಟಿಷ್ ಕಾಲದಲ್ಲಿ 500,1000 ಎಕರೆ ಅವರ ಇನಾಮ್ತಿ ಜಮೀನು ನೀಡಲಾಗಿತ್ತು. ಈ ಜಮೀನಿನಲ್ಲಿ ರೈತರು ಕೃಷಿ ಮಾಡುತ್ತಿದ್ದರು ಎಂದರು.
ಇನಾಂ ಜಮೀನು ಕಾಯ್ದೆ ತಿದ್ದುಪಡಿಗೆ ಸರ್ಕಾರ ಚಿಂತನೆ: ಸಚಿವ ಆರ್. ಅಶೋಕ್
ಸರ್ಕಾರದ್ದೂ ಅಲ್ಲ, ರೈತರದ್ದೂ ಅಲ್ಲ ಎಂಬ ಪರಿಸ್ಥಿತಿಯಲ್ಲಿ 70 ಸಾವಿರ ಎಕರೆ ಜಮೀನು ಇದೆ. ಇಂತಹ ಜಮೀನಿನಲ್ಲಿ ಲಕ್ಷಕ್ಕೂ ಹೆಚ್ಚು ರೈತರು ಉಳುಮೆ ಮಾಡ್ತಿದ್ದಾರೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಇನಾಮ್ತಿ ಜಮೀನಲ್ಲಿ ಸಾಗುವಳಿ ಮಾಡುತ್ತಿದ್ದ ರೈತರಿಗೆ ಪಹಣಿ ಕೊಡುವ ಕೆಲಸ ಆಗುತಿತ್ತು. ಆದರೆ ಇನಾಮ್ತಿ ಕಾಯ್ದೆ ರದ್ದಾದಾಗ ತಿಳುವಳಿಕೆ ಕೊರತೆಯಿಂದ ಲಕ್ಷಾಂತರ ರೈತರು ಅರ್ಜಿಯನ್ನು ಸಲ್ಲಿಸಿಲ್ಲ. ಬಳ್ಳಾರಿ ಜಿಲ್ಲೆ ಒಂದರಲ್ಲೇ 30 ಸಾವಿರ ಎಕರೆ ಜಮೀನಿದ್ದು, ಅದೇ ರೀತಿ ಬೇರೆ ಬೇರೆ ಜಿಲ್ಲೆಯಲ್ಲಿ 70 ಸಾವಿರ ಎಕರೆ ಜಮೀನಿದೆ. ಈ ಬಗ್ಗೆ ಪರಿಶೀಲನೆ ನಡೆಸಲು ನಿವೃತ್ತ ಅಧಿಕಾರಿ ಪಿ.ಎಸ್. ವಸ್ತ್ರದ ನೇತೃತ್ವದಲ್ಲಿ ಕಮಿಟಿ ರಚಿಸಲಾಗಿತ್ತು. ರೈತರಿಗೆ ಅರ್ಜಿ ಸಲ್ಲಿಸಲು ಒಂದಿಷ್ಟು ಕಾಲಾವಕಾಶ ನೀಡಬೇಕೆಂದು ಸಮಿತಿ ವರದಿ ಕೊಟ್ಟಿತ್ತು ಎಂದರು.
ಸರ್ಕಾರದ್ದು ಅಲ್ಲ, ರೈತರದ್ದೂ ಅಲ್ಲ ಎಂಬ ಪರಿಸ್ಥಿತಿಯಲ್ಲಿ ಜಮೀನಿದೆ. 70 ಸಾವಿರ ಎಕರೆಯಲ್ಲಿ ಲಕ್ಷಕ್ಕೂ ಹೆಚ್ಚು ರೈತರು ಉಳುಮೆ ಮಾಡ್ತಿದ್ದಾರೆ. ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಚರ್ಚಿಸಿ ಕಾಯ್ದೆಗೆ ತಿದ್ದುಪಡಿ ತಂದು ಕ್ಯಾಬಿನೆಟ್ನಲ್ಲಿ ಇಟ್ಟು ಅಂತಹ ರೈತರಿಂದ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಮಾಡುತ್ತೇವೆ ಎಂದಿದ್ದಾರೆ.
ಓದಿ:ಸುರಕ್ಷಿತ ವಾತಾವರಣದಲ್ಲೇ SSLC ಪರೀಕ್ಷೆ.. ಸಚಿವರು ಬಿಡುಗಡೆ ಮಾಡಿದ ವಿಶೇಷ ಎಸ್ಒಪಿಯಲ್ಲೇನಿದೆ?