ಕರ್ನಾಟಕ

karnataka

ETV Bharat / state

ಬೆಂಗಳೂರು ಸೇರಿ 11 ಮಹಾನಗರ ಪಾಲಿಕೆಗಳಲ್ಲಿ 1786 ಆಶಾ ಕಾರ್ಯಕರ್ತೆಯರ ನೇಮಕಾತಿಗೆ ಸರ್ಕಾರ ಆದೇಶ

ಬೆಂಗಳೂರು ಸೇರಿದಂತೆ ಒಟ್ಟು 11 ಮಹಾನಗರ ಪಾಲಿಕೆಗಳಿಗೆ 1786 ಆಶಾ ಕಾರ್ಯಕರ್ತೆಯರನ್ನು ವಾರ್ಷಿಕ ಮೊತ್ತ 23.58 ಕೋಟಿ ರೂ ವೆಚ್ಚದಲ್ಲಿ ನೇಮಕ ಮಾಡಿಕೊಳ್ಳಲು ಸರ್ಕಾರ ಸೂಚಿಸಿದೆ

Asha activists
ಆಶಾ ಕಾರ್ಯಕರ್ತೆ

By

Published : Sep 3, 2020, 5:46 PM IST

ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ 1229 ಆಶಾ ಕಾರ್ಯಕರ್ತೆಯರು ಎನ್​ಯುಎಚ್​ಎಂ (ರಾಷ್ಟ್ರೀಯ ಆರೋಗ್ಯ ಅಭಿಯಾನ) ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದು, ಜನಸಂಖ್ಯೆಗೆ ಆಧಾರವಾಗಿ ಹೊಸದಾಗಿ 1322 ಆಶಾ ಕಾರ್ಯಕರ್ತೆಯರ ನೇಮಕಕ್ಕೆ ಸರ್ಕಾರ ಅನುಮತಿ ನೀಡಿದೆ.

ಆಶಾ ಕಾರ್ಯಕರ್ತೆಯರ ನೇಮಕದ ಆದೇಶ

5 ಸಾವಿರ ಜನರಿಗೆ ಒಬ್ಬರಂತೆ, 1,27,56,029 ಜನರಿಗೆ 2551 ಆಶಾ ಕಾರ್ಯಕರ್ತೆಯರು ನಗರಕ್ಕೆ ಅಗತ್ಯವಿದೆ. ತಾಯಿ ಆರೋಗ್ಯ, ಮಕ್ಕಳ ಆರೋಗ್ಯ, ಕುಟುಂಬ ಕಲ್ಯಾಣ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಆರೋಗ್ಯ ಸೇವೆಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಆಶಾ ಕಾರ್ಯಕರ್ತೆಯರ ನೇಮಕಕ್ಕೆ ಅನುಮತಿ ನೀಡಿದೆ.

ಬೆಂಗಳೂರು ಸೇರಿದಂತೆ ಒಟ್ಟು 11 ಮಹಾನಗರ ಪಾಲಿಕೆಗಳಿಗೆ 1786 ಆಶಾ ಕಾರ್ಯಕರ್ತೆಯರನ್ನು ವಾರ್ಷಿಕ ಮೊತ್ತ 23.58 ಕೋಟಿ ರೂ. ವೆಚ್ಚದಲ್ಲಿ ನೇಮಕ ಮಾಡಿಕೊಳ್ಳಲು ಸೂಚಿಸಿದೆ. ನಾಲ್ಕು ಸಾವಿರ ಮಾಸಿಕ ಗೌರವ ಧನ, 2 ಸಾವಿರ ಪ್ರೋತ್ಸಾಹ ಧನ ಹಾಗೂ ವಿವಿಧ ಐದು ಸಾವಿರ ಪ್ರೋತ್ಸಾಹ ಧನ ಸೇರಿ ಒಟ್ಟು 23.58 ಕೋಟಿ ಅನುದಾನ ಮೀಸಲಿಡಲಾಗಿದೆ.

ABOUT THE AUTHOR

...view details