ಕರ್ನಾಟಕ

karnataka

ETV Bharat / state

ಒಮಿಕ್ರಾನ್​ಗೆ ಏಕರೂಪ ಚಿಕಿತ್ಸಾ ಪದ್ಧತಿ ಅನುಸರಿಸಲು ಕ್ಲಿನಿಕಲ್ ತಜ್ಞರ ಸಮಿತಿ ರಚಿಸಿದ ಸರ್ಕಾರ - ಕ್ಲಿನಿಕಲ್ ತಜ್ಞರ ಸಮಿತಿ

ಒಮಿಕ್ರಾನ್ ಚಿಕಿತ್ಸೆಗೆ ನೆರವಾಗಲು ರಾಜ್ಯ ಸರ್ಕಾರವು 17 ಸದಸ್ಯರ ಕ್ಲಿನಿಕಲ್ ತಜ್ಞರ ಸಮಿತಿ ಪುನಃ ರಚಿಸಿದೆ.

omicron treatment
ಒಮಿಕ್ರಾನ್​

By

Published : Dec 7, 2021, 4:35 AM IST

ಬೆಂಗಳೂರು:ಒಮಿಕ್ರಾನ್ ರೂಪಾಂತರಿಗೆ ಏಕರೂಪ ಚಿಕಿತ್ಸಾ ಪದ್ಧತಿ ಅನುಸರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 17 ಸದಸ್ಯರ ಕ್ಲಿನಿಕಲ್ ತಜ್ಞರ ಸಮಿತಿ ಪುನಃ ರಚಿಸಿ ಆದೇಶಿಸಿದೆ.

ಬಿ.ಎಂ.ಸಿ.ಆರ್.ಐ ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ರವಿ ಅಧ್ಯಕ್ಷತೆಯಲ್ಲಿ ಕ್ಲಿನಿಕಲ್ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಕೋವಿಡ್-19 ನಿಯಂತ್ರಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಸೂಚನೆ/ಆದೇಶಗಳನ್ನು ಕಾರ್ಯಗತಗೊಳಿಸಲು ಮತ್ತು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಸಮನ್ವಯ ಸಾಧಿಸಿ, ಅಗತ್ಯ ಸೂಚನೆಗಳನ್ನು ಮತ್ತು ಸಲಹೆಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು.

ಕೋವಿಡ್-19ಗೆ ತುತ್ತಾದ ರೋಗಿಗಳಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಐಸೋಲೇಷನ್​ ಬೆಡ್​ಗಳನ್ನು ಸ್ಥಾಪನೆ ಮಾಡುವುದಕ್ಕೆ ಕ್ರಮ ಕೈಗೊಳ್ಳುಬೇಕು. ಅಲ್ಲದೆ ಸೋಂಕಿತರ ಚಿಕಿತ್ಸೆಗೆ ನಿಗದಿಪಡಿಸಿರುವ ಪ್ರಮಾಣಿತ ಶಿಷ್ಟಾಚಾರ(Standard Protocol) ಪಾಲನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ಕ್ಲಿನಿಕಲ್ ತಜ್ಞರ ಸಮಿತಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಗಿರೀಶ್ ಪಿ.ಜಿ., ಜಯದೇವ ಆಸ್ಪತ್ರೆಯ ನಿರ್ದೇಶಕ ಸಿ.ಎನ್.ಮಂಜುನಾಥ್, ರಾಜೀವ್ ಗಾಂಧಿ ಹೃದ್ರೋಗ ಸಂಸ್ಥೆಯ ಡಾ.ಸಿ.ನಾಗರಾಜ್ ಸೇರಿದಂತೆ ಮುಂತಾದ ತಜ್ಞ ವೈದ್ಯರು ಸದಸ್ಯರಾಗಿದ್ದಾರೆ.

ಇದನ್ನೂ ಓದಿ:ಪದ್ಮಶ್ರೀ ಕದ್ರಿ ಗೋಪಾಲನಾಥ್ ಪುಣ್ಯಸ್ಮರಣೆಯಲ್ಲಿ ಅಸ್ವಸ್ಥರಾದ ಪತ್ನಿ : ವೈದ್ಯರಾಗಿ ಚಿಕಿತ್ಸೆ ನೀಡಿದ ಜಿಲ್ಲಾಧಿಕಾರಿ

ABOUT THE AUTHOR

...view details