ಕರ್ನಾಟಕ

karnataka

ETV Bharat / state

ಪಿಎಸ್ಐ ನೇಮಕಾತಿಯಲ್ಲಿ ದರ್ಶನ್ ಗೌಡ ಅಕ್ರಮ ನಡೆಸಿರೋದು FSL ನಲ್ಲಿ ಬಹಿರಂಗ? - ಪಿಎಸ್​​ಐ ಅಕ್ರಮ ನೇಮಕಾತಿ ಪ್ರಕರಣ

ಪಿಎಸ್​​ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ದರ್ಶನ ಗೌಡ ಅಕ್ರಮ ನಡೆಸಿರುವುದು ಎಫ್ಎಸ್ಎಲ್ ವರದಿಯಲ್ಲಿ ಬಹಿರಂಗವಾಗಿದೆ ಎನ್ನಲಾಗ್ತಿದೆ.

ಪಿಎಸ್ಐ ನೇಮಕಾತಿಯಲ್ಲಿ ದರ್ಶನ್ ಗೌಡ ಅಕ್ರಮ ನಡೆಸಿರೋದು FSL ನಲ್ಲಿ ಬಹಿರಂಗ ?
ಪಿಎಸ್ಐ ನೇಮಕಾತಿಯಲ್ಲಿ ದರ್ಶನ್ ಗೌಡ ಅಕ್ರಮ ನಡೆಸಿರೋದು FSL ನಲ್ಲಿ ಬಹಿರಂಗ ?

By

Published : Jun 9, 2022, 3:43 PM IST

ಬೆಂಗಳೂರು: ಪಿಎಸ್​​ಐ ನೇಮಕಾತಿ ಪ್ರಕರಣದಲ್ಲಿ ದರ್ಶನ ಗೌಡ ಅಕ್ರಮ ನಡೆಸಿರುವುದು ಎಫ್ಎಸ್ಎಲ್ ವರದಿಯಲ್ಲಿ ಬಹಿರಂಗವಾಗಿದೆ ಎನ್ನಲಾಗ್ತಿದೆ. ಪರೀಕ್ಷೆಯಲ್ಲಿ ಉತ್ತರ ಬರೆಯದೇ ದರ್ಶನ್ ಗೌಡ ನಾಲ್ಕನೇ ರ್ಯಾಂಕ್ ಬಂದಿದ್ದ ಎನ್ನುವುದನ್ನು ಎಫ್ಎಸ್ಎಲ್‌ ವರದಿ ಬಹಿರಂಗಪಡಿಸಿದೆ ಎಂದು ತಿಳಿದುಬಂದಿದೆ.

ಪರೀಕ್ಷೆ ಬರೆಯುವ ದಿನ ಸಂಪೂರ್ಣ ಗೊತ್ತಿದ್ದ ಕೆಲವು ಉತ್ತರಗಳನ್ನು ಮಾತ್ರ ಬರೆದಿದ್ದ ದರ್ಶನ್ ಉಳಿದ ಜಾಗದಲ್ಲಿ ಖಾಲಿ ಬಿಟ್ಟು ಉತ್ತರ ಪತ್ರಿಕೆ ಕೊಟ್ಟು ಹೋಗಿದ್ದ. ಈ ಉತ್ತರ ಪತ್ರಿಕೆಯನ್ನ ನೇಮಕಾತಿ ವಿಭಾಗದಲ್ಲೇ ತಿದ್ದಿರುವ ಅನುಮಾನ ಉಂಟಾಗಿದೆ‌. ಖಾಲಿ ಉತ್ತರ ಪತ್ರಿಕೆ ಕೊಟ್ಟು ಹೋಗಿದ್ದ ದರ್ಶನ್ ಗೌಡ ಒಎಂಆರ್ ಶೀಟ್ ನಂಬರ್ ಪಡೆದು ನಂತರ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುವವರ ಜೊತೆಗೆ ಡೀಲ್ ನಡೆಸಿ ಉತ್ತರ ಬರೆಸಿರುವ ಶಂಕೆ ವ್ಯಕ್ತವಾಗಿದೆ.

ಪಿಎಸ್ಐ ಕೇಸ್ ಹೊರಬರುತ್ತಿದ್ದಂತೆ ದರ್ಶನ್ ಗೌಡ ಸಚಿವ ಅಶ್ವತ್ಥ್​ ನಾರಾಯಣ ಮುಖೇನ ಲಕ್ಷ-ಲಕ್ಷ ಹಣ ಕೊಟ್ಟು ಕೆಲಸ ಗಿಟ್ಟಿಸಿಕೊಂಡಿದ್ದಾನೆಂದು ಕಾಂಗ್ರೆಸ್ ಆರೋಪ ಮಾಡಿತ್ತು. ಸುಮಾರು 80 ಲಕ್ಷ ರೂಪಾಯಿ ಹಣvನ್ನು ದರ್ಶನ್ ನೀಡಿದ್ದ ಎಂದು ಆರೋಪ‌ ಕೇಳಿ ಬಂದಿತ್ತು. ನೇಮಕಾತಿ ವಿಭಾಗದಲ್ಲಿ ತಿದ್ದುಪಡಿ ನಂತರ ಓಎಂಆರ್ ಶೀಟ್ ನಲ್ಲೂ ಕೀ ಅನ್ಸರ್ ನೋಡಿ ಮತ್ತೆ ಕಾರ್ಬನ್ ಕಾಪಿ ತಿದ್ದಿದ್ದ. ಆದರೆ, ಈ ಎಫ್ ಎಸ್ಎಲ್​​ನಲ್ಲಿ ಅಸಲಿ ಸತ್ಯ ಬಯಲಾಗಿದೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: 'ನಾನು ಬಜೆಪಿ ನಾಯಕರನ್ನು ಟೀಕಿಸಿದರೆ ನಮ್ಮ ಪಕ್ಷದವರೇ ನನ್ನನ್ನು ಸಮರ್ಥಿಸಿಕೊಳ್ಳುವುದಿಲ್ಲ'

ABOUT THE AUTHOR

...view details