ಕರ್ನಾಟಕ

karnataka

ETV Bharat / state

ಬಾಡಿಗೆ ಲ್ಯಾಪ್ ಟಾಪ್​​ಗಳನ್ನ ಮಾರುತ್ತಿದ್ದ ಚಾಲಾಕಿಗಳು: ಇಬ್ಬರು ಆರೋಪಿಗಳು ಅಂದರ್​ - ಬಾಡಿಗೆಗೆ ಲ್ಯಾಪ್ ಟಾಪ್​​ಗಳನ್ನ ಪಡೆದು ವಂಚನೆ

ಬಾಡಿಗೆಗೆ ಲ್ಯಾಪ್ ಟಾಪ್​​ಗಳನ್ನ ಪಡೆದು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸೈಫ್ ಪಾಷ (25) ಹಾಗೂ ಮೊಯಿನುದ್ದೀನ್ ಖುರೇಷಿ (33) ಬಂಧಿತರು.

Fraud for renting laptops
ಬಾಡಿಗೆಗೆ ಲ್ಯಾಪ್ ಟಾಪ್​​ಗಳನ್ನ ಪಡೆದು ವಂಚನೆ: ಇಬ್ಬರು ಆರೋಪಿಗಳ ಬಂಧನ

By

Published : Dec 7, 2020, 2:21 PM IST

ಬೆಂಗಳೂರು: ಬಾಡಿಗೆಗೆ ಲ್ಯಾಪ್ ಟಾಪ್​​ಗಳನ್ನ ಪಡೆದು ವಂಚನೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಬಾಡಿಗೆಗೆ ಲ್ಯಾಪ್ ಟಾಪ್​​ಗಳನ್ನ ಪಡೆದು ವಂಚನೆ: ಇಬ್ಬರು ಆರೋಪಿಗಳ ಬಂಧನ

ಸೈಫ್ ಪಾಷ (25) ಹಾಗೂ ಮೊಯಿನುದ್ದೀನ್ ಖುರೇಷಿ (33) ಬಂಧಿತರು. ಇವರಿಬ್ಬರು ರೆಂಟ್ ಶೇರ್, ಐ ನ್ಯಾಪ್, ಡಿಜಿಟ್ರಾನ್, ಅಕ್ಷತ ಇನ್ಫೊಟೆಕ್ ಕಂಪನಿಗಳಿಂದ ಲ್ಯಾಪ್ ಟಾಪ್​ಗಳನ್ನು​ ಬಾಡಿಗೆಗೆ ಪಡೆದು ನಂತರ ಜಸ್ಟ್ ಡಯಲ್ ಮೂಲಕ ಲ್ಯಾಪ್ ಟಾಪ್ ಗ್ರಾಹಕರನ್ನು ಸಂಪರ್ಕಿಸುತ್ತಿದ್ದರು. ಬಳಿಕ ಕಂಪನಿ ನಷ್ಟದಲ್ಲಿದೆ, ಕಡಿಮೆ ದರದಲ್ಲಿ ಲ್ಯಾಪ್‌ಟಾಪ್ ಕೊಡುವುದಾಗಿ ನಂಬಿಸಿ ಮಾರಾಟ ಮಾಡುತ್ತಿದ್ದರು ಎನ್ನಲಾಗ್ತಿದೆ. ಈ ಬಗ್ಗೆ ವಿವಿಧ ಲ್ಯಾಪ್ ಟಾಪ್ ಕಂಪನಿಯ ಮಾಲೀಕರು ನೀಡಿದ ದೂರಿನ ಮೇರೆಗೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 46 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 96 ಲ್ಯಾಪ್ ಟಾಪ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ಸದ್ಯ ಆರೋಪಿಗಳು ಇನ್ನಷ್ಟು ಬೇರೆ ಬೇರೆ ಅಪರಾಧ ಕೃತ್ಯ ಮಾಡಿರುವ ಕಾರಣ ತನಿಖೆ ಮುಂದುವರೆದಿದೆ.

ABOUT THE AUTHOR

...view details