ಕರ್ನಾಟಕ

karnataka

ETV Bharat / state

ವಿಮಾನದಲ್ಲಿ ಬಂದು‌ ಸರಗಳ್ಳತನ‌ ಮಾಡಿ ವಿಮಾನದಲ್ಲಿ ಹೋಗುತ್ತಿದ್ದ ಐವರು ಐನಾತಿ ಕಳ್ಳರ ಬಂಧನ - ಬೆಂಗಳೂರಿನಲ್ಲಿ ಸರಗಳ್ಳರ ಬಂಧನ

ಇತ್ತೀಚೆಗೆ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಇಂದಿರಾ ಎಂಬ ಮಹಿಳೆ ಒಂಟಿಯಾಗಿ ಹಾಲು ತರಲು ನಡೆದುಕೊಂಡು ಹೋಗುತ್ತಿದ್ದಾಗ, ಅಡ್ಡಗಟ್ಟಿ ಸರಗಳ್ಳತನ ಮಾಡಿದ್ದರು.‌ ಈ ಸಂಬಂಧ‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಹುಡುಕಾಟ ನಡೇಸಿದ್ದರು. ಕೊನೆಗೂ ನಗರದ ಪೊಲೀಸರು ಈ ಗ್ಯಾಂಗ್​ನ ಐವರು ಆರೋಪಿಗಳನ್ನ ಹೆಡೆಮುರಿಕಟ್ಟಿದ್ದಾರೆ..

ಐವರು ಐನಾತಿ ಕಳ್ಳರ ಬಂಧನ
ಐವರು ಐನಾತಿ ಕಳ್ಳರ ಬಂಧನ

By

Published : Aug 25, 2021, 8:53 PM IST

Updated : Aug 25, 2021, 10:52 PM IST

ಬೆಂಗಳೂರು : ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ವಿಮಾನದಲ್ಲಿ ಬಂದು ನಗರದಲ್ಲಿ ಸರಗಳ್ಳತನ ಸೇರಿ ವಿವಿಧ ಅಪರಾಧ ಕೃತ್ಯಗಳಲ್ಲಿ ನಿರಂತರವಾಗಿ ಭಾಗಿಯಾಗಿದ್ದ ಕುಖ್ಯಾತ ಬವೇರಿಯಾ ಗ್ಯಾಂಗ್​​ನ ಐವರು ಸದಸ್ಯರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ದೆಹಲಿ ಹಾಗೂ ಜಮ್ಮು‌-ಕಾಶ್ಮೀರ ಮೂಲದ ರಾಹುಲ್, ಗೌರವ್, ನಿತಿನ್,ರಿಯಾಜ್ ಅಹ್ಮದ್, ಕಮಲ್ ಬಂಧಿತ ಆರೋಪಿಗಳು. ಬಂಧಿತರು ದೆಹಲಿ ಹಾಗೂ ಜಮ್ಮು-ಕಾಶ್ಮಿರ ಭಾಗದವರಾಗಿದ್ದಾರೆ. ಬಂಧಿತರಿಂದ 13 ಲಕ್ಷ ಮೌಲ್ಯದ 260 ಗ್ರಾಂ ಚಿನ್ನಾಭರಣ ಹಾಗೂ ಒಂದು ಬೈಕ್ ಜಪ್ತಿ ಮಾಡಿದ್ದಾರೆ.

ವಿಮಾನದಲ್ಲಿ ಬರುತ್ತಿದ್ದ ಕಳ್ಳರು:

ಸುಲಭವಾಗಿ ಹಣ ಸಂಪಾದನೆ ದಾರಿ ಕಂಡುಕೊಂಡಿರುವ ಈ ಗ್ಯಾಂಗ್​ನ ಸದಸ್ಯರು ದೆಹಲಿ, ಜಮ್ಮು-ಕಾಶ್ಮೀರ ಹಾಗೂ ಜಾರ್ಖಂಡ್ ಸೇರಿ ದೇಶದ ಇತರೆ‌ ರಾಜ್ಯಗಳಲ್ಲಿ ವಿಮಾನ ಮೂಲಕ ಬಂದು ಸರಣಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅದೇ ರೀತಿ ಬೆಂಗಳೂರಿಗೆ ಬಂದ ಆರೋಪಿಗಳು ನಗರದ ಹೊರವಲಯದಲ್ಲಿ ಬಾಡಿಗೆ ಮನೆ ಪಡೆದು ಕೃತ್ಯ ಎಸಗುತ್ತಿದ್ದರು.

ಅಡುಗೆಯವನನ್ನು ಇಟ್ಟುಕೊಂಡಿದ್ದ ಕಳ್ಳರು:

ಬೈಕ್​​​​ನಲ್ಲಿ ಸರಗಳ್ಳತನಕ್ಕೆ ಹೋಗುವವರಿಗಾಗಿಯೇ ಓರ್ವ ಆರೋಪಿ ಅಡುಗೆ ಮಾಡುತ್ತಿದ್ದ. ಹೊರಗೆ ಆಹಾರ ಸೇವನೆ ಮಾಡಿದರೆ ಅನಾರೋಗ್ಯ ಕಾಡಲಿದೆ ಎಂಬ ಕಾಳಜಿಯಿಂದ ಅಡುಗೆ ಮಾಡಲು ಪ್ರತ್ಯೇಕ ವ್ಯಕ್ತಿಯನ್ನು‌‌ ನಿಯೋಜಿಸಿದ್ದರು.
ಬವೇರಿಯಾ ಗ್ಯಾಂಗ್​​ನ ಐವರು ಅರೆಸ್ಟ್​:

ಇತ್ತೀಚೆಗೆ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಇಂದಿರಾ ಎಂಬ ಮಹಿಳೆ ಒಂಟಿಯಾಗಿ ಹಾಲು ತರಲು ನಡೆದುಕೊಂಡು ಹೋಗುತ್ತಿದ್ದಾಗ, ಅಡ್ಡಗಟ್ಟಿ ಸರಗಳ್ಳತನ ಮಾಡಿದ್ದರು.‌ ಈ ಸಂಬಂಧ‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಹುಡುಕಾಟ ನಡೆಸಿದ್ದರು. ಕೊನೆಗೂ ನಗರದ ಪೊಲೀಸರು ಈ ಗ್ಯಾಂಗ್​ನ ಐವರು ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ.
ಇದನ್ನು ಓದಿ : FIR ದಾಖಲಾಗಿದೆ, ಶೀಘ್ರವೇ ಆರೋಪಿಗಳ ಬಂಧನ: ಪೊಲೀಸ್ ಆಯುಕ್ತ ಚಂದ್ರಗುಪ್ತ

Last Updated : Aug 25, 2021, 10:52 PM IST

ABOUT THE AUTHOR

...view details