ಬೆಂಗಳೂರು:ನಗರದ ಪ್ರತಿಷ್ಠಿತ ಪ್ರದೇಶವಾಗಿರುವ ಎಂ.ಜಿ. ರಸ್ತೆಯ ಫರಾ ಟವರ್ನಲ್ಲಿ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದೆ.
ಎಂ.ಜಿ.ರಸ್ತೆಯ ಫರಾ ಟವರ್ನಲ್ಲಿ ಅಗ್ನಿ ಅವಘಡ..ಅದೃಷ್ಟವಶಾತ್ ಕಟ್ಟಡದಲ್ಲಿದ್ದವರು ಸೇಫ್ ಎಂ.ಜಿ. ರಸ್ತೆಯ ಫರಾ ಟವರ್ ಯುಕೋ ಬ್ಯಾಂಕ್ ಇರುವ ಆರನೇ ಮಹಡಿಯಲ್ಲಿ ಈ ಅವಘಡ ಸಂಭವಿಸಿದ್ದು, ಮಹಡಿಯಲ್ಲಿರುವ ವೈರಿಂಗ್ನಲ್ಲಿ ಶಾಕ್ ಸರ್ಕ್ಯೂಟ್ ಉಂಟಾಗಿ ಬೆಂಕಿಯ ಹೊಗೆ 3 ಮತ್ತು 4ನೇ ಮಹಡಿಗೂ ತಲುಪಿತ್ತು. ಆರನೇ ಮಹಡಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದರು. ಆತಂಕದಿಂದ ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಇಲಾಖೆಯ ಎಡಿಜಿಪಿ ಸುನೀಲ್ ಅಗರವಾಲ್ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸುಮಾರು 3 ಘಂಟೆಗೆ ಘಟನೆ ನಡೆದಿದೆ ಅಂತ ಮಾಹಿತಿ ತಿಳಿಯಿತು. ಎಲೆಕ್ಟ್ರಿಕ್ ರೂಂನಲ್ಲಿ ತುಂಬಾ ಕೇಬಲ್ ವೈರ್ಗಳಿದ್ದವು. ಹೊಗೆ ತುಂಬಾ ಇದ್ದಿದ್ದರಿಂದ ಜನ ಗಾಬರಿಗೊಂಡಿದ್ದರು. ಘಟನೆಯಲ್ಲಿ ಯಾರಿಗೂ ಏನು ತೊಂದರೆಯಿಲ್ಲ ಎಂದು ತಿಳಿಸಿದರು.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹತ್ತಿಕೊಂಡಿರೋ ಸಾಧ್ಯತೆಯಿದೆ. ಈ ಬಗ್ಗೆ ತನಿಖೆ ನಡೆಸುತ್ತೇವೆ. ಕಟ್ಟಡದ ಓಸಿ ಇದೆಯೋ, ಇಲ್ವಾ ಎಂಬುದರ ಬಗ್ಗೆ ಪರಿಶೀಲಿಸುತ್ತೇವೆ. ಬ್ಯಾಂಕ್ ಒಳಗಿನ ಯಾವುದೇ ಪರಿಕರಗಳಿಗೆ ಹಾನಿಯಾಗಿಲ್ಲ. ಸಿಬ್ಬಂದಿ ಭಯಭೀತರಾಗಿ ಕಟ್ಟಡದ ಮೇಲೆ ತೆರಳಿದ್ದರು ಅವರನ್ನ ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.