ಕರ್ನಾಟಕ

karnataka

ETV Bharat / state

ನಾಳೆ ಶಾಂತಿ ಕದಡಲೆತ್ನಿಸುವ BJP,RSS​ ಪ್ರಚೋದನೆಗೆ ಒಳಗಾಗಬೇಡಿ.. ಮಾಜಿ ಸಚಿವ ಡಿಕೆಶಿ ಮನವಿ

ಹಿಂದುಳಿದ ಕನಕಪುರವನ್ನು ಅಭಿವೃದ್ಧಿ ಪಡಿಸಿದ್ದೇನೆ. ಜಾತಿ, ಧರ್ಮದ ಹೆಸರಲ್ಲಿ ಭಿನ್ನಾಭಿಪ್ರಾಯ ಮೂಡಿಸಬಾರದು ಎಂದು ಹೇಳಿದರು. ಎಲ್ಲರೂ ಅವರವರ ಧರ್ಮ, ಜಾತಿಯಲ್ಲಿ ನಂಬಿಕೆ ಆಚಾರ-ವಿಚಾರಗಳಂತೆ ಬದುಕಬೇಕು. ನಾವೆಲ್ಲರೂ ಇಲ್ಲಿ ಅಣ್ಣ-ತಮ್ಮಂದಿರಂತೆ ಬದುಕಿದ್ದೇವೆ. ಹಾಗೇ ಬದುಕಿರೋಣ ಎಂದರು.

By

Published : Jan 12, 2020, 11:58 AM IST

farmer dks video release in bangalore
ಮಾಜಿ ಸಚಿವ ಡಿ.ಕೆ.ಶಿವಕುಮಾರ

ಬೆಂಗಳೂರು:ಕನಕಪುರದ ಹೆಸರು ಕೆಡಿಸುವ ನಿಟ್ಟಿನಲ್ಲಿ ಬಿಜೆಪಿ, ಆರ್​ಎಸ್​ಎಸ್​ ಮುಖಂಡರ ಪ್ರಚೋದನಾ ಭಾಷಣಕ್ಕೆ ಮುಂದಾಗುತ್ತಾರೆ. ಅದಕ್ಕಾಗಿ ಯುವಕರು, ಹಿರಿಯರು ಅವರ ಪ್ರಚೋದನೆಗೆ ಒಳಗಾಗ ಬೇಡಿ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ ಮನವಿ ಮಾಡಿದರು.

ಕನಕಪುರದ ಜನತೆಗೆ ಮಾಜಿ ಸಚಿವ ಡಿ ಕೆ ಶಿವಕುಮಾರ ಮನವಿ..

ಜನವರಿ 13ರಂದು ಬಿಜೆಪಿ,ಆರ್​ಎಸ್​ಎಸ್​ ನೇತೃತ್ವದಲ್ಲಿ ಮಠಾಧೀಶರು ಸೇರಿ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ವಿಚಾರವಾಗಿ ಅಶಾಂತಿ ಸೃಷ್ಟಿಸಲಿದ್ದಾರೆ. ಅವರ ಪ್ರಚೋದನೆಗೆ ಯಾರೂ ಕೂಡ ಒಳಗಾಗಬಾರದು. ಕನಕಪುರದಲ್ಲಿ ಶಾಂತಿ ಕಾಪಾಡಬೇಕು ಎಂದು ಡಿಕೆಶಿ ಮನವಿ ಮಾಡಿದರು.

ಹಿಂದುಳಿದ ಕನಕಪುರವನ್ನು ಅಭಿವೃದ್ಧಿ ಪಡಿಸಿದ್ದೇನೆ. ಜಾತಿ, ಧರ್ಮದ ಹೆಸರಲ್ಲಿ ಭಿನ್ನಾಭಿಪ್ರಾಯ ಮೂಡಿಸಬಾರದು ಎಂದು ಹೇಳಿದರು. ಎಲ್ಲರೂ ಅವರವರ ಧರ್ಮ, ಜಾತಿಯಲ್ಲಿ ನಂಬಿಕೆ ಆಚಾರ-ವಿಚಾರಗಳಂತೆ ಬದುಕಬೇಕು. ನಾವೆಲ್ಲರೂ ಇಲ್ಲಿ ಅಣ್ಣ-ತಮ್ಮಂದಿರಂತೆ ಬದುಕಿದ್ದೇವೆ. ಹಾಗೇ ಬದುಕಿರೋಣ ಎಂದರು.

ABOUT THE AUTHOR

...view details