ಕರ್ನಾಟಕ

karnataka

ETV Bharat / state

ಮಹಾ ಸರ್ಕಾರ ಮನವೊಲಿಸಿದ ಖಂಡ್ರೆ : ತವರಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಮೌನೇಶ್ವರಿ !! - eshwar khandre latest news

ಈಶ್ವರ್ ಖಂಡ್ರೆ, ಟ್ಟೀಟ್ ಮೂಲಕ ಮಹಾರಾಷ್ಟ ನಾಯಕಿ ಹಾಗೂ ಸಂಸದೆ ಸುಪ್ರಿಯ ಸುಳೆ ಹಾಗೂ ಮಹಾರಾಷ್ಟ್ರ ರಾಜ್ಯದ ಸಚಿವರಾದ ಬಾಳಸಾಬ್​​​ ತೋರಟ್, ಅಮಿತ್ ದೇಶಮುಖ ಅವರಿಗೆ ಕರ್ನಾಟಕದ ಮಹಿಳೆಯನ್ನು ಕರ್ನಾಟಕಕ್ಕೆ ಕಳುಹಿಸಿಕೊಡಲು ವ್ಯವಸ್ಥೆ ಮಾಡುವಂತೆ ಟ್ವಿಟರ್​ ಮೂಲಕ ಮನವಿ ಮಾಡಿಕೊಂಡಿದ್ದಾರೆ.

eshwar khandre
ಮಹಾ ಸರ್ಕಾರ ಮನವೊಲಿಸಿದ ಖಂಡ್ರೆ

By

Published : May 9, 2020, 12:46 PM IST

ಬೆಂಗಳೂರು : ತವರಿನಲ್ಲಿ ಮಗುವಿಗೆ ಜನ್ಮ ನೀಡುವ ಆಶಯ ಹೊಂದಿದ್ದ ಮಹಿಳೆಯ ಪರವಾಗಿ ಮಹಾರಾಷ್ಟ್ರ ಸರ್ಕಾರವನ್ನು ಮನವೊಲಿಸುವಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಯಶಸ್ವಿಯಾಗಿದ್ದಾರೆ.

ಬಸವಕಲ್ಯಾಣ ನಿವಾಸಿಯಾದ ಮೌನೇಶ್ವರಿ ಹಾಗೂ ಪತಿ ನಾಗೇಶ್ ಅವರು ಲಾಕ್​‘ಡೌನ್​ನಿಂದಾಗಿ ಪುಣೆಯ ಮಂಜ್ರಿ ಗ್ರಾಮದಲ್ಲಿ ಸಿಲುಕಿಕೊಂಡಿದ್ದಾರೆ. ಮೌನೇಶ್ವರಿ 8 ತಿಂಗಳ ಗರ್ಭಿಣಿಯಾಗಿದ್ದು, ತಾವು ಹೇಗಾದರೂ ತವರಿಗೆ ಬಂದು ಮಗುವಿಗೆ ಜನ್ಮ ನೀಡಬೇಕೆಂದು ಬಯಸಿದ್ದರು. ಈ ಬಯಕೆಯನ್ನು ತಮ್ಮ ಪತಿಗೆ ಹೇಳಿಕೊಂಡಿದ್ದಾರೆ. ನಂತರ ನಾಗೇಶ್ ಈ ವಿಷಯವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ಗಮನಕ್ಕೆ ತಂದ್ದಿದ್ದಾರೆ.

ಕೂಡಲೇ ಸ್ಪಂದಿಸಿದ ಈಶ್ವರ್ ಖಂಡ್ರೆ, ಟ್ಟೀಟ್ ಮೂಲಕ ಮಹಾರಾಷ್ಟ ನಾಯಕಿ ಹಾಗೂ ಸಂಸದೆ ಸುಪ್ರಿಯ ಸುಳೆ ಹಾಗೂ ಮಹಾರಾಷ್ಟ್ರ ರಾಜ್ಯದ ಸಚಿವರಾದ ಬಾಳಸಾಬ್​ ತೋರಟ್, ಅಮಿತ್ ದೇಶಮುಖ ಅವರಿಗೆ ಟ್ವಿಟರ್​ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಈಶ್ವರ್ ಖಂಡ್ರೆ ಮನವಿಗೆ ಸ್ಪಂದಿಸಿದ ನಾಯಕರು, ಮೌನೇಶ್ವರಿ ಅವರನ್ನು ಊರಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಿದ್ದಾರೆ. ಪರಿಣಾಮ ಇಂದು ಮೌನೇಶ್ವರಿಯವರು ಬಸವಕಲ್ಯಾಣಕ್ಕೆ ಆಗಮಿಸುತ್ತಿದ್ದಾರೆ. ತಮ್ಮ ಮನವಿಗೆ ಸ್ಪಂದಿಸಿದ ಮಹಾರಾಷ್ಟ್ರದ ನಾಯಕರಿಗೆ ಖಂಡ್ರೆ ಅಭಿನಂದನೆ ಸಲ್ಲಿಸಿದ್ದಾರೆ.

ABOUT THE AUTHOR

...view details