ಕರ್ನಾಟಕ

karnataka

ETV Bharat / state

ನಿರಂತರ ಪರಿಶ್ರಮ, ಆಸಕ್ತಿಯೇ ಸಾಧನೆಗೆ ಕಾರಣ; ಎಂಜಿನಿಯರಿಂಗ್​ ಸಿಇಟಿ ಪ್ರಥಮ ರ್‍ಯಾಂಕ್ ವಿಜೇತ ರಕ್ಷಿತ್ - ಇಂಜಿನಿಯರಿಂಗ್​ ಸಿಇಟಿ

ನಗರದ ಆರ್​ ವಿ ಪಿಯು ಕಾಲೇಜಿನ ವಿದ್ಯಾರ್ಥಿ ರಕ್ಷಿತ್ ಎಂಜಿನಿಯರಿಂಗ್ ವಿಭಾಗದ ಸಿಇಟಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

Rakshith
ರಕ್ಷಿತ್ ಎಂ ಇಂಜಿನಿಯರಿಂಗ್​ನಲ್ಲಿ ಮೊದಲ ರ‍್ಯಾಂಕ್ ಪಡೆದ ವಿದ್ಯಾರ್ಥಿ

By

Published : Aug 21, 2020, 6:00 PM IST

Updated : Aug 21, 2020, 6:54 PM IST

ಬೆಂಗಳೂರು:ಕೊರೊನಾ ವೈರಸ್ ಹರಡುವಿಕೆಯ ನಡುವೆಯೂ ಯಶಸ್ವಿಯಾಗಿ ಸಿಇಟಿ ಪರೀಕ್ಷೆ ನಡೆದ ಬಳಿಕ ಇದೀಗ ಫಲಿತಾಂಶವೂ ಬಂದಿದೆ. ಕೊರೊನಾ ಆತಂಕ ಇದ್ದರೂ, ಅಭ್ಯರ್ಥಿಗಳು ಧೈರ್ಯ ಕಳೆದುಕೊಳ್ಳದೆ ಜಯಿಸಿದ್ದಾರೆ.

ಕಳೆದ ಬಾರಿಯಂತೆ ಈ ಬಾರಿಯೂ ಬೆಂಗಳೂರಿನಲ್ಲಿ ಸಾಕಷ್ಟು ಮಂದಿ ರ‍್ಯಾಂಕಿಂಗ್ ಪಡೆದಿದ್ದು, ಕೆ.ವಿ. ಮೋಹನ್ ಹಾಗೂ ರೂಪ ದಂಪತಿಗಳ ಪುತ್ರ ರಕ್ಷಿತ್ ಸಿಇಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ನಿರಂತರ ಪರಿಶ್ರಮ, ಆಸಕ್ತಿಯೇ ಸಾಧನೆಗೆ ಕಾರಣ; ಎಂಜಿನಿಯರಿಂಗ್​ ಸಿಇಟಿ ಪ್ರಥಮ ರ್‍ಯಾಂಕ್ ವಿಜೇತ ರಕ್ಷಿತ್

ಈ ಬಗ್ಗೆ ಮಾತಾನಾಡಿರುವ ರಕ್ಷಿತ್, ಸಿಇಟಿ ಎಂಜಿನಿಯರಿಂಗ್​ನಲ್ಲಿ ಮೊದಲ ಸ್ಥಾನ ಪಡೆದಿರುವುದು ಬಹಳ ಸಂತಸ ತಂದಿದೆ. ನಿರಂತರ ಪರಿಶ್ರಮ - ಆಸಕ್ತಿಯೇ ನನ್ನ ಈ ಸಾಧನೆಗೆ ಕಾರಣ. ನಾನು ನಗರದ ಆರ್​ ವಿ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದು, ನನ್ನ ಸಾಧನೆಗೆ ಸಹಕರಿಸಿ ಪ್ರೋತ್ಸಾಹಿಸಿದ ಪೋಷಕರಿಗೆ, ಶಿಕ್ಷಕರಿಗೆ ಧನ್ಯವಾದ ಎಂದು ಹೇಳಿದರು. ಸಿಇಟಿಯಲ್ಲಿ ಮೊದಲ ಸ್ಥಾನಕ್ಕೆ ಬರಲು ನಿರಂತರವಾಗಿ ಓದುವುದು, ಅದಕ್ಕೆ ಬೇಕಾದ ಆಸಕ್ತಿ ಹಾಗೂ ಸಾಧಿಸಬೇಕೆಂಬ ಛಲ ನನ್ನಲ್ಲಿದೆ ಎಂದ ಅವರು, ಮುಂದೆ ಕಂಪ್ಯೂಟರ್ ಸೈನ್ಸ್​ನಲ್ಲಿ ಇಂಜಿನಿಯರಿಂಗ್ ಮಾಡುವ ಆಸೆ ಇದೆ ಎಂದು ತಿಳಿಸಿದರು.‌

Last Updated : Aug 21, 2020, 6:54 PM IST

ABOUT THE AUTHOR

...view details