ಕರ್ನಾಟಕ

karnataka

ETV Bharat / state

ದಂಪತಿ ಆತ್ಮಹತ್ಯೆ: ಸಾವಿಗೂ ಮುನ್ನ ಗೋಡೆ ಮೇಲೆ ಬರೆದಿದ್ದಾದರು ಏನು? - ಮರಣೋತ್ತರ ಪರೀಕ್ಷೆ

ಬೆಂಗಳೂರಿನ ಗಿರಿನಗರದ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದು, ಮಕ್ಕಳ ಮಾನಸಿಕ, ದೈಹಿಕ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಗೋಡೆ ಮೇಲೆ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಿರಿನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಆತ್ಮಹತ್ಯೆಗೆ ಶರಣಾದ ದಂಪತಿ

By

Published : Sep 1, 2019, 1:48 PM IST

ಬೆಂಗಳೂರು:ಈಚೆಗೆ ಗಿರಿನಗರದ ನಿವಾಸಿ ಕೃಷ್ಣಮೂರ್ತಿ (70), ಪತ್ನಿ ಸ್ವರ್ಣ ಮೂರ್ತಿ (68) ದಂಪತಿ ಆತ್ಮಹತ್ಯೆಗೆ ಶರಣಾಗಿದ್ದರು. ಈಗ ವೃದ್ಧ ದಂಪತಿ ಗೋಡೆಯ ಮೇಲೆ ಬರೆದ ವಿಚಾರ ತನಿಖೆಯಲ್ಲಿ ಬಯಲಾಗಿದೆ.

ಆತ್ಮಹತ್ಯೆಗೆ ಶರಣಾದ ದಂಪತಿ

ಹೆತ್ತ ಮಗ, ಸೊಸೆಯ ಕಿರುಕುಳಕ್ಕೆ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಸಂಗತಿ ಹಾಗೂ ಇನ್ನಿತರ ವಿಷಯಗಳು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿವೆ.

ಗೋಡೆಯ ಮೇಲೆ ಬರೆದದ್ದಾದರೂ ಏನು?: ಈ ದಂಪತಿ ದಕ್ಷಿಣಾ ವಿಭಾಗದ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್ 23ರಂದು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ‌ ಮಾಡಿಕೊಂಡಿದ್ದರು.

ಪೊಲೀಸರು ತನಿಖೆ ಕೈಗೊಂಡು ಮರಣೋತ್ತರ ಪರೀಕ್ಷೆ ನಡೆಸಿದಾಗ‌, ಮಗ ಹಾಗೂ ಸೊಸೆಯ ಮಾನಸಿಕ ಹಾಗೂ ದೈಹಿಕ ಕಿರುಕುಳ ಸಹಿಸಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ವೃದ್ಧೆಯ ಹಣೆಯ ಮೇಲೆ ಬರೆದಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಮನೆಯ ಗೋಡೆ ಮೇಲೂ ಬರೆದಿದ್ದಾರೆ ಎಂಬ ವಿಚಾರ ಬೆಖಲಿಗೆ ಬಂದಿದೆ.

ನರಕದಿಂದ ಸ್ವರ್ಗದ ಕಡೆಗೆ ನಮ್ಮಿಬ್ಬರ ಪಯಣ. ಕೊನೆ ಗಳಿಗೆಯಲ್ಲಿ ನಮ್ಮನ್ನ "ಕ್ಷಮಿಸಿ‌" ಅಂತ ವೃದ್ಧೆ ಸ್ವರ್ಣಮೂರ್ತಿ ಹಣೆ ಮೇಲೆ ಬರೆದು ಸಾವನ್ನಪ್ಪಿದ್ದಾರೆ. ಸದ್ಯ ಗಿರಿನಗರ ಪೊಲೀಸರು ಎಫ್​ಐಆರ್ ದಾಖಲಿಸಿ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details