ಕರ್ನಾಟಕ

karnataka

ETV Bharat / state

ಮೊಬೈಲ್​ ಬಿಟ್ಟು ಚೌಕಬಾರ ಆಡುತ್ತಿದ್ದ ಹುಡುಗರನ್ನು ಕಂಡು ಖುಷ್​ ಆದ ಶಿಕ್ಷಣ ಸಚಿವರು!

ಸಚಿವರು ನಗರದ ಸರ್ಕಾರಿ ಕಚೇರಿಗಳಿರುವ ವಿವಿ ಟವರ್ಸ್ ಕಟ್ಟಡದಲ್ಲಿ ಇಲಾಖಾ ಸಭೆಯೊಂದರಲ್ಲಿ ಭಾಗವಹಿಸಿದ್ದರು. ಸಭೆ ಮುಗಿಸಿ ಹೊರಡುವಾಗ, ಹೊರಗೆ ಮರದ ಕೆಳಗೆ ಖುಷಿಯಾಗಿ ಚೌಕಬಾರ ಆಡುತ್ತಿದ್ದ ವಿವಿಧ ಇಲಾಖೆಗಳ ಕಾರು ಚಾಲಕರನ್ನು ನೋಡುತ್ತಾ ಒಂದು ಕ್ಷಣ ಸಂಭ್ರಮಿಸಿದ್ದಾರೆ. ಟೈಂ ಪಾಸ್ ಮಾಡಲೇಬೇಕಾದ ಇವರು, ನಮ್ಮ ದೇಸಿ ಆಟ ಆಡುತ್ತಿದ್ದುದು ನನಗೆ ಸಂತಸ ತಂದಿದೆ ಎಂದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ.

By

Published : Sep 9, 2020, 4:57 PM IST

Education minister
ಶಿಕ್ಷಣ ಸಚಿವ

ಬೆಂಗಳೂರು: ದೇಸಿ ಆಟ ಚೌಕಬಾರ ಆಡುತ್ತಿದ್ದ ಯುವಕರನ್ನು ನೋಡಿ ಶಿಕ್ಷಣ ಸಚಿವರು ಖುಷಿಯಾಗಿದ್ದು, ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಒಂದನ್ನು ಶೇರ್​ ಮಾಡಿದ್ದಾರೆ.

ಗ್ರಾಮೀಣ ಪ್ರದೇಶ ಸೇರಿದಂತೆ ಹಲವು ನಗರಗಳಲ್ಲಿ ದೇಸಿ ಆಟಗಳು ಮೂಲೆ ಗುಂಪಾಗಿವೆ. ಈಗಿನ ಮಕ್ಕಳು ಅಂಗೈಯಗಲದ ಮೊಬೈಲ್ ಹಿಡಿದುಕೊಂಡು ಮೊಬೈಲ್ ಗೇಂ ಆಟವಾಡುತ್ತಾ ಅವರದೇ ಲೋಕದಲ್ಲಿ ಮುಳುಗಿ ಹೋಗಿರ್ತಾರೆ. ವರ್ಷಕ್ಕೊಮ್ಮೆ ದೇಸಿ ಕ್ರೀಡೆಯ ನೆಪದಲ್ಲಿ ಅಷ್ಟೇ ಕಾಣುವ ನಮ್ಮ ದೇಸಿ ಆಟಗಳು, ಸಾಮಾನ್ಯ ದಿನಗಳಲ್ಲಿ ದೂರವಿರುತ್ತವೆ. ಆದರೆ, ಈ ದೇಸಿ ಆಟಕ್ಕೆ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಫಿದಾ ಆಗಿದ್ದು, ಚೌಕಬಾರದ ಬಗ್ಗೆ ಮಾತಾಡಿದ್ದಾರೆ.

ಸುರೇಶ್​ ಕುಮಾರ್​ ಪೋಸ್ಟ್​

ಸಚಿವರು ನಗರದ ಸರ್ಕಾರಿ ಕಚೇರಿಗಳಿರುವ ವಿವಿ ಟವರ್ಸ್ ಕಟ್ಟಡದಲ್ಲಿ ಇಲಾಖಾ ಸಭೆಯೊಂದರಲ್ಲಿ ಭಾಗವಹಿಸಿದ್ದರು. ಸಭೆ ಮುಗಿಸಿ ಹೊರಡುವಾಗ, ಹೊರಗೆ ಮರದ ಕೆಳಗೆ ಖುಷಿಯಾಗಿ ಚೌಕಬಾರ ಆಡುತ್ತಿದ್ದ ವಿವಿಧ ಇಲಾಖೆಗಳ ಕಾರು ಚಾಲಕರನ್ನು ನೋಡುತ್ತಾ ಒಂದು ಕ್ಷಣ ಸಂಭ್ರಮಿಸಿದ್ದಾರೆ. ಟೈಂ ಪಾಸ್ ಮಾಡಲೇಬೇಕಾದ ಇವರು, ನಮ್ಮ ದೇಸಿ ಆಟ ಆಡುತ್ತಿದ್ದುದು ನನಗೆ ಸಂತಸ ತಂದಿದೆ ಎಂದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ABOUT THE AUTHOR

...view details