ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ 16 ಕಡೆ ಇಡಿ ದಾಳಿ: 80 ಬ್ಯಾಂಕ್ ಖಾತೆ ಸೀಜ್‌ ಮಾಡಿ 1 ಕೋಟಿ ಹಣ ಜಪ್ತಿ - ಇಡಿ ಅಧಿಕಾರಿಗಳು ದಾಳಿ

ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದಿಸುವ ಆಸೆ ತೋರಿಸಿ ವಂಚಿಸಿದ ಆ್ಯಪ್​ಗೆ ಸಂಬಂಧಿಸಿದ 16 ಕಡೆಗಳಲ್ಲಿ ಇಡಿ ದಾಳಿ ನಡೆಸಿದೆ. ಜೊತೆಗೆ 1 ಕೋಟಿ ಹಣ ಜಪ್ತಿ ಮಾಡಿಕೊಂಡಿದೆ.

ಇಡಿ ದಾಳಿ
ಇಡಿ ದಾಳಿ

By

Published : Nov 17, 2022, 6:59 PM IST

ಬೆಂಗಳೂರು:ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದಿಸಬಹುದು ಎಂದು ಜಾಹೀರಾತು ನೀಡಿ ವಂಚಿಸಿದ ಆರೋಪದ ಮೇಲೆ ಸೂಪರ್ ಲೈಕ್ ಆನ್ ಲೈನ್ ಅರ್ನಿಂಗ್ಸ್ ಅಪ್ಲಿಕೇಷನ್ ಕಂಪನಿಗೆ ಸಂಬಂಧಿಸಿದ ಬೆಂಗಳೂರಿನ 16 ಕಡೆಗಳಲ್ಲಿ‌ ಇಡಿ ಅಧಿಕಾರಿಗಳು ದಾಳಿ ನಡೆಸಿ 1 ಕೋಟಿ ಹಣ ಜಪ್ತಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹೆಚ್ಚು ಹಣ ನೀಡುವ ಆಸೆ ತೋರಿಸಿ ಕೋಟ್ಯಾಂತರ ರೂಪಾಯಿ ಹಣ ವಂಚಿಸಿದ್ದ ಆರೋಪದಡಿ ಈ ಹಿಂದೆ ದಕ್ಷಿಣ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಅಕ್ರಮವಾಗಿ ವರ್ಗಾವಣೆ ಕಂಡುಬಂದಿದ್ದರಿಂದ ಸೆನ್‌ ಪೊಲೀಸರು ಇಡಿಗೆ ಪತ್ರ ಬರೆದಿದ್ದರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಇಡಿ ಅಧಿಕಾರಿಗಳು, ಕಂಪನಿಗೆ ಸೇರಿದ 16 ಕಡೆಗಳಲ್ಲಿ ದಾಳಿ‌ ನಡೆಸಿ ಕಂಪನಿ ಹೆಸರಿನಲ್ಲಿದ್ದ 80 ಬ್ಯಾಂಕ್ ಅಕೌಂಟ್​​ಗಳನ್ನ‌ ಸೀಜ್‌ ಮಾಡಿ 1 ಕೋಟಿ ರೂಪಾಯಿ ವಶಕ್ಕೆ ಪಡೆದುಕೊಂಡಿದ್ದಾರೆ.

ಸೂಪರ್ ಲೈಕ್ ಆ್ಯಪ್​​ನಲ್ಲಿ ಹಣ ಹೂಡುವಂತೆ‌‌ ಪ್ರಚೋದಿಸುತ್ತಿದ್ದ ಕಂಪನಿಯು ಸಾರ್ವಜನಿಕರಲ್ಲಿ ನಂಬಿಕೆ ಹುಟ್ಟಿಸಲು ಸಿನಿಮಾ ತಾರೆಯರು ಹಾಗೂ ಹೆಸರಾಂತ ವ್ಯಕ್ತಿಗಳಿಂದ ಪೇಡ್ ವಿಡಿಯೋ ಮಾಡಿಸಿ ಹರಿಬಿಡುತ್ತಿದ್ದರು. ಇದನ್ನು ನಂಬಿ ಮೊದಲ ಬಾರಿ ಹಣ ಹೂಡುತ್ತಿದ್ದವರಿಗೆ ಭರವಸೆ ನೀಡಿದಂತೆ ಲಾಭಾಂಶದ ಹಣ ನೀಡುತ್ತಿದ್ದರು. ಇದನ್ನು ನಂಬಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಹಣ ಹೂಡುತ್ತಿದ್ದರು. ಹಣ ವರ್ಗಾವಣೆ ಜಾಲದ ಹಿಂದೆ ಹಣಕಾಸು ಸಂಸ್ಥೆಗಳ ಪಾತ್ರದ ಬಗ್ಗೆ ಶಂಕಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿರುವುದಾಗಿ ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.

(ಓದಿ: ಕೋಟ್ಯಂತರ ರೂ‌. ಅಕ್ರಮ ಆರೋಪ.. ಇಜಾಂಜ್ ಕಂಪನಿ ಪಾಲುದಾರನನ್ನು ಬಂಧಿಸಿದ ಇಡಿ)

ABOUT THE AUTHOR

...view details