ಕರ್ನಾಟಕ

karnataka

ETV Bharat / state

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 43ನೇ ಅಧ್ಯಕ್ಷರಾದ ಡಿಆರ್‌ ಜೈ ರಾಜ್..

ಕನ್ನಡ ಚಿತ್ರರಂಗದ ಮಾತೃ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 43ನೇ ಅಧ್ಯಕ್ಷರಾಗಿ ಗುಬ್ಬಿ ಡಿಆರ್ ಜೈರಾಜ್ ಇಂದು ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷರಿಗೆ ನಿರ್ಗಮಿತ ಅಧ್ಯಕ್ಷರಾದ ಚಿನ್ನೇಗೌಡರು ಅಧಿಕಾರ ಹಸ್ತಾಂತರಿಸಿದರು.

By

Published : Jun 30, 2019, 4:50 PM IST

Updated : Jun 30, 2019, 5:31 PM IST

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ಬೆಂಗಳೂರು:ಕನ್ನಡ ಚಿತ್ರರಂಗದ ಮಾತೃ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 43ನೇ ಅಧ್ಯಕ್ಷರಾಗಿ ಗುಬ್ಬಿ ಡಿಆರ್ ಜೈರಾಜ್ ಇಂದು ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷರಿಗೆ ನಿರ್ಗಮಿತ ಅಧ್ಯಕ್ಷರಾದ ಚಿನ್ನೇಗೌಡರು ಅಧಿಕಾರ ಹಸ್ತಾಂತರಿಸಿದರು.

ವಾಣಿಜ್ಯ ಮಂಡಳಿಯಲ್ಲಿ ಇಂದು ನಡೆದ ಇಸಿ ಕಮಿಟಿ ಸಭೆಯಲ್ಲಿ ನೂತನ ಅಧ್ಯಕ್ಷರಿಗೆ ನಿರ್ಗಮಿತ ಅಧ್ಯಕ್ಷರು ಅಧಿಕಾರ ಹಸ್ತಾಂತರಿಸಿದರು. ಉಪಾಧ್ಯಕ್ಷರಾಗಿ ನಿರ್ಮಾಪಕರ ವಲಯದಿಂದ ಉಮೇಶ್ ಬಣಕಾರ್ ಹಾಗೂ ವಿತರಕರ ವಲಯದಿಂದ ನಿರ್ದೇಶಕ ನಾಗಣ್ಣ ಅವರು ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿಗಳಾಗಿ ನಿರ್ಮಾಪಕರ ವಲಯದಿಂದ ಎನ್ಎಮ್ ಸುರೇಶ್ ಹಾಗೂ ವಿತರಕರ ವಲಯದಿಂದ ಕೆವಿ ವೆಂಕಟೇಶ್ ಅಧಿಕಾರ ಸ್ವೀಕರಿಸಿದರು.

ಡಿಆರ್ ಜೈ ರಾಜ್ ನೇಮಕ

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನೂತನ ಅಧ್ಯಕ್ಷರಾದ ಜೈರಾಜ್, ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೆ ಹಾಗೂ ಮಾಜಿ ಅಧ್ಯಕ್ಷರಿಗೆ ಧನ್ಯವಾದ ತಿಳಿಸಿದರು. ಚಿತ್ರಮಂದಿರಗಳ ಸಮಸ್ಯೆಯನ್ನ ಈಗ ಇಂಡಸ್ಟ್ರಿ ಎದುರಿಸುತ್ತಿದೆ. ಅದನ್ನ ಪರಿಹರಿಸಲು ಪ್ರಮುಖವಾಗಿ ಗಮನ ಹರಿಸುವುದಾಗಿ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ತಮಿಳು ತೆಲುಗು ಚಿತ್ರಗಳಿಗಿಂತ ಹೆಚ್ಚಾಗಿ ಕನ್ನಡ ಚಿತ್ರಗಳಲ್ಲಿ ಇನ್ನೂರಕ್ಕೂ ಹೆಚ್ಚು ಚಿತ್ರಗಳು ಬರುತ್ತಿವೆ. ಆದರೆ, ಸಕ್ಸಸ್ ರೇಟ್ ತುಂಬಾ ಕಡಿಮೆ ಇದೆ. ಇದರಿಂದ ಸಮಸ್ಯೆ ಉದ್ಭವವಾಗಿದೆ. ಮುಂದಿನ ದಿನಗಳಲ್ಲಿ ನಾನು ನಿರ್ಮಾಪಕರುಗಳನ್ನು ಕರೆದು ಉತ್ತಮ ಚಿತ್ರಗಳ ನಿರ್ಮಾಣ ಮಾಡುವ ಬಗ್ಗೆ ಗಮನಹರಿಸಿ ಎಂಬುದರ ಬಗ್ಗೆ ಮಾತಾನಾಡುತ್ತೇನೆ ಎಂದರು.

ಅಲ್ಲದೆ ಮಲ್ಟಿಫ್ಲೆಕ್ಸ್​ಗಳಲ್ಲಿ ಕನ್ನಡ ಚಿತ್ರಗಳಿಗೆ ಹೆಚ್ಚಿನ ಆದ್ಯತೆ ಸಿಗುವಂತೆ ಮಲ್ಟಿಫ್ಲೆಕ್ಸ್​ನವರ ಜೊತೆಯೂ ಮಾತನಾಡುತ್ತೇವೆ. ಯಾಕಂದರೆ, ಕರ್ನಾಟಕದಲ್ಲಿ ಇರುವುದರಿಂದ ಮಲ್ಟಿಫ್ಲೆಕ್ಸ್​ನವರು ಕನ್ನಡ ಚಿತ್ರಗಳಿಗೆ ಹೆಚ್ಚಿನ ಆದ್ಯತೆ ಕೊಡುವುದು ಅವರ ಜವಾಬ್ದಾರಿಯಾಗಿದೆ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಗಮನ ಹರಿಸುತ್ತೇವೆ ಎಂದರು. ಜೊತೆಗೆ ಹಿಂದಿನ ಅಧ್ಯಕ್ಷರುಗಳು ಜನತಾ ಟಾಕೀಸ್ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ. ನಾವೂ ಕೂಡ ಸರ್ಕಾರದ ಗಮನ ಸೆಳೆದು ಜನತಾ ಟಾಕೀಸ್ ಆಗುವ ಬಗ್ಗೆ ಗಮನ ಹರಿಸುತ್ತೇವೆ ಎಂದು ತಿಳಿಸಿದರು.

Last Updated : Jun 30, 2019, 5:31 PM IST

ABOUT THE AUTHOR

...view details