ಬೆಂಗಳೂರು:ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಸೈಬರ್ ಖದೀಮರು ಚುರುಕುಗೊಂಡಿದ್ದಾರೆ. ಬಗೆ ಬಗೆಯ ತಂತ್ರಗಳನ್ನು ರೂಪಿಸಿ ಹಣ ದೋಚಲು ಆರಂಭಿಸಿದ್ದಾರೆ. ಸಾರ್ವಜನಿಕರು ಖದೀಮರು ಕುತಂತ್ರಕ್ಕೆ ಬಲಿಯಾಗದಿರಿ ಎಂದು ಸೈಬರ್ ಕ್ರೈಂ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಯಾವ್ಯಾವ್ಯ ರೀತಿ ಸೈಬರ್ ಕ್ರೈಂ ಮೋಸ ಮಾಡುತ್ತಾರೆ ಎಂಬುದರ ಬಗ್ಗೆ ಸೈಬರ್ ತಜ್ಞೆ ಶುಭಮಂಗಳ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಸೈಬರ್ ಕ್ರೈಂ ಮಾಹಿತಿ ನೀಡಿದ ಸೈಬರ್ ತಜ್ಞೆ ಶುಭಮಂಗಳ ಕೊರೊನಾ ದೇಣಿಗೆ ನೀಡುವಂತೆ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಹೆಸರಿನಲ್ಲಿ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನವಿಗೆ ಸ್ಪಂದಿಸಿ ಲಕ್ಷಾಂತರ ಜನರು ಸ್ಪಂದಿಸುತ್ತಿದ್ದಾರೆ. ಕೊರೊನಾ ರಿಲೀಫ್ ಫಂಡ್ ಹೆಸರಿನಲ್ಲಿ ಖದೀಮರು ದೇಣಿಗೆ ಸಂಗ್ರಹಿಸುವ ಸೋಗಿನಲ್ಲಿ ನಕಲಿ ಲಿಂಕ್ಗಳನ್ನು ಹರಿಬಿಟ್ಟು ದೇಣಿಗೆ ನೀಡುವಂತೆ ಸೈಬರ್ ಚೋರರು ಯಾಮಾರಿಸುತ್ತಿದ್ದಾರೆ. ವಿವಿಧ ಬ್ಯಾಂಕ್ಗಳು ಕೊರೊನಾ ಫಂಡ್ ನೆಪದಲ್ಲಿ ಹಣ ವಂಚನೆ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗುತ್ತಿವೆ.
ಇಎಂಐ, ಲೋನ್, ಅಕೌಂಟ್ ಸೆಟ್ಟಿಂಗ್, ಬಡ್ಡಿಮನ್ನಾ, ನೆಪದಲ್ಲಿ ಬ್ಯಾಂಕ್ಗಳ ಹೆಸರಲ್ಲಿ ನಕಲಿ ಕರೆಗಳು ಹಾಗೂ ಸಂದೇಶಗಳು ಸಾರ್ವಜನಿಕರಿಗೆ ಮಾಡುವ ಪ್ರವೃತ್ತಿ ಹೆಚ್ಚಾಗಿವೆ. ಸೈಬರ್ ಕ್ರೈಂ ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಕಳ್ಳರ ಬಗ್ಗೆ ಸಿಸಿಬಿ ಪೊಲೀಸರ ನಿಗಾವಹಿಸಿದ್ದಾರೆ. ಸಾರ್ವಜನಿಕರು ಆನ್ಲೈನ್ ವಂಚನೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.
ಸೈಬರ್ ಕ್ರೈಂ ಜಾಲದಲ್ಲಿ ಸಿಲುಕದಿರಿ ಕೊರೊನಾ ವೈರಸ್ ಬಿಕ್ಕಟ್ಟಿನ ಪರಿಸ್ಥಿತಿಯನ್ನೇ ದುರ್ಬಳಕೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಚ್ಚರದಿಂದಿರಿ.
- ದೇಣಿಗೆ ಸಂಗ್ರಹಿಸುವ ನೆಪದಲ್ಲಿ ಪಿಎಂ ಹಾಗೂ ಸಿಎಂ ರಿಲೀಫ್ ಫಂಡ್ ನಕಲಿ ಲಿಂಕ್ಗಳಿಂದ ಹಣ ಎಗರಿಸಲು ಸಂಚು.
- ತುರ್ತು ಸಂದರ್ಭದಲ್ಲಿ ಕೊಡುವ ಸರ್ಕಾರದ ಈ- ಪಾಸ್ ವ್ಯವಸ್ಥೆ ಡೂಪ್ಲಿಕೇಟ್ ಲಿಂಕ್ ಕಳುಹಿಸಿ ಹಣ ಪಾವತಿದರೆ ತ್ವರಿತವಾಗಿ ಪಾಸ್ ಸಿಗಲಿದೆ ಎಂದು ಯಾಮಾರಿಸುತ್ತಾರೆ.
- ಇಎಂಐ, ಸಾಲ ಹಾಗೂ ಬಡ್ಡಿಮನ್ನಾ ಮಾಡುವುದಾಗಿ ಹೇಳಿ ಲಿಂಕ್ ಕಳುಹಿಸಿ ಅರ್ಜಿ ನೋಂದಾಯಿಸಬೇಕು ಎಂದು ನಿಮ್ಮ ವೈಯಕ್ತಿಕ ವಿವರ ಸಂಗ್ರಹಿಸಿ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡುತ್ತಾರೆ.
- ಲಾಕ್ ಡೌನ್ ವೇಳೆಯಲ್ಲಿ ಬಹುತೇಕರು ಮನೆಯಲ್ಲಿ ಉಳಿದುಕೊಳ್ಳುವುದರಿಂದ ಮನೆಯಿಂದಲೇ ಕೆಲಸ ಮಾಡಿ ಸಾವಿರಾರು ರೂಪಾಯಿ ಸಂಪಾದಿಸಬಹುದು. ನೋಂದಣಿ ಮಾಡಿಕೊಳ್ಳಲು ಇಂತಿಷ್ಟು ಹಣ ಪಾವತಿಸಿ ಎಂದು ಫೇಕ್ ಲಿಂಕ್ ಕಳುಹಿಸಿ ವಂಚಿಸುತ್ತಾರೆ.
- ಕೊರೊನಾ ವೈರಸ್ಗೆ ಲಸಿಕೆ ಕಂಡುಹಿಡಿದಿದ್ದು ಇದನ್ನು ಕೊಂಡುಕೊಳ್ಳಲು ಹಣ ಕಟ್ಟಿ ಎಂದು ವಂಚಿಸುವ ಜಾಲ ಸಕ್ರಿಯವಾಗಿದೆ.
- ವಾಟ್ಸ್ಆ್ಯಪ್, ಎಸ್ಎಂಎಸ್, ಈ-ಮೇಲ್, ಫೇಸ್ಬುಕ್ ಸೇರಿದಂತೆ ಅನಧಿಕೃತ ಲಿಂಕ್ಗಳನ್ನು ನೋಡುವಾಗ ಎಚ್ಚರವಹಿಸಿ. ಸ್ವಲ್ಪ ಯಾಮಾರಿದರೂ ಕ್ಷಣಾರ್ಧದಲ್ಲಿ ನಿಮ್ಮ ಬ್ಯಾಂಕ್ ಖಾತೆಯಿಂದ ಖದೀಮರು ಹಣ ದೋಚುವ ಸಾಧ್ಯತೆಯಿದೆ.