ಕರ್ನಾಟಕ

karnataka

By

Published : Apr 27, 2020, 9:24 PM IST

ETV Bharat / state

ಜಾನುವಾರುಗಳನ್ನು ಬೀದಿಗೆ ಬಿಡದಂತೆ ನಿರ್ದೇಶಿಸಿ; ಹೈಕೋರ್ಟ್​ಗೆ ಮನವಿ

ಮೇವು ಒದಗಿಸಲು ಸಾಧ್ಯವಾಗದೇ ರಾಜ್ಯದಲ್ಲಿ ಅನೇಕರು ತಮ್ಮ ಜಾನುವಾರುಗಳನ್ನು ಬೀದಿಗೆ ಬಿಡುತ್ತಿದ್ದಾರೆ. ಈ ಜಾನುವಾರುಗಳು ಸಾರ್ವಜನಿಕರಿಗೆ ಅಪಾಯಕಾರಿಯಾಗುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಕೀಲೆ ಗೀತಾ ಮಿಶ್ರಾ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

Appeal to High Court
ಜಾನುವಾರುಗಳನ್ನು ಬೀದಿಗೆ ಬಿಡದಂತೆ ಸೂಚಿಸಿ ಹೈಕೋರ್ಟ್​ಗೆ ಮನವಿ

ಬೆಂಗಳೂರು: ಲಾಕ್‍ಡೌನ್ ಪರಿಣಾಮದಿಂದ ಮೇವು ಒದಗಿಸಲು ಸಾಧ್ಯವಾಗದೇ ರಾಜ್ಯದಲ್ಲಿ ಅನೇಕರು ತಮ್ಮ ಜಾನುವಾರುಗಳನ್ನು ಬೀದಿಗೆ ಬಿಡುತ್ತಿದ್ದಾರೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ವಕೀಲೆ ಗೀತಾ ಮಿಶ್ರಾ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಕೊರೊನಾ ವೈರಸ್ ನಿಯಂತ್ರಣ ಸಂಬಂಧ ಸಲ್ಲಿಸಿರುವ ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪೂರಕವಾಗಿ ಈ ಲಿಖಿತ ಮನವಿಯನ್ನು ಸಲ್ಲಿಸಲಾಗಿದೆ. ಅರ್ಜಿಯಲ್ಲಿ ಜಾನುವಾರುಗಳನ್ನು ಬೀದಿಗೆ ಬಿಡುತ್ತಿರುವ ವಿಚಾರ ಪ್ರಸ್ತಾಪಿಸಿರುವ ವಕೀಲರು, ಜಟಕಾವಾಲಾಗಳು ತಮ್ಮ ಕುದುರೆಗಳನ್ನು ಮತ್ತು ಹೈನುಗಾರರು ತಮ್ಮ ಗೋವುಗಳನ್ನು ಬೀದಿಗೆ ತಂದು ಬಿಡುತ್ತಿದ್ದಾರೆ. ಹಸಿವಿನಿಂದ ಬಳಲುತ್ತಿರುವ ಈ ಜಾನುವಾರುಗಳು ಸಾರ್ವಜನಿಕರಿಗೆ ಅಪಾಯಕಾರಿಯಾಗುವ ಸಾಧ್ಯತೆ ಇದೆ.

ಬೀದಿ ನಾಯಿಗಳು ಮತ್ತು ಸಾಕು ಪ್ರಾಣಿಗಳ ವಿಚಾರವಾಗಿ ಆದೇಶ ನೀಡಿರುವ ಹೈಕೋರ್ಟ್ ಅವುಗಳಿಗೆ ಆಹಾರ, ನೀರು ಪೂರೈಸುವಂತೆ ಮತ್ತು ರಕ್ಷಣೆಗೆ ಅಗತ್ಯ ಕ್ರಮಗಳನ್ನು ಜರುಗಿಸುವಂತೆ ನಿರ್ದೇಶಿಸಿದೆ. ಆದರೆ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೇವು ಒದಗಿಸಲು ಸಾಧ್ಯವಾಗದೇ ರಾಜ್ಯದಲ್ಲಿ ಅನೇಕರು ತಮ್ಮ ಜಾನುವಾರುಗಳನ್ನು ಬೀದಿಗೆ ಬಿಡುತ್ತಿದ್ದಾರೆ. ಈ ವಿಚಾರವನ್ನು ಸಹ ಸರ್ಕಾರ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಅದೇ ರೀತಿ, ದೊಡ್ಡ ಪ್ರಮಾಣದಲ್ಲಿ ಕಲ್ಲಂಗಡಿ ಬೆಳೆಯುವ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ರೈತರಿಗೆ ಅದನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ದಾಸನಪುರ ಮಾರುಕಟ್ಟೆ ಪಾವಗಡದಿಂದ ನೂರಾರು ಕಿಮೀ ದೂರದಲ್ಲಿ ಇದೆ. ಈ ರೈತರು ತಮ್ಮ ಬೆಳೆಗಳನ್ನು ಬಹಳ ದಿನಗಳವರೆಗೆ ಶೇಖರಿಸಿಡಲು ವ್ಯವಸ್ಥೆ ಇಲ್ಲ. ಪಾವಗಡ ತಾಲೂಕು ಸೇರಿದಂತೆ ಕೊರಟಗೆರೆ, ಮಧುಗಿರಿ ತಾಲೂಕು ಸಮೀಪ ಯಾವುದೇ ಶೈತ್ಯಗಾರ ಇಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ನೆರವು ಮತ್ತು ಸೌಲಭ್ಯ ಕಲ್ಪಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಕೋರಿದ್ದಾರೆ.

ABOUT THE AUTHOR

...view details