ಕರ್ನಾಟಕ

karnataka

ETV Bharat / state

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಪದಗ್ರಹಣ: ಡಿಜಿಟಲ್​ ತಂತ್ರಜ್ಞಾನದಡಿ ಪಾಲ್ಗೊಳ್ಳಲು ಮನವಿ - kpcc news

ಬೆಂಗಳೂರಿನಲ್ಲಿ ಕೆಲವೇ ಮುಖಂಡರ ಸಮ್ಮುಖದಲ್ಲಿ ನಡೆಯಲಿರುವ ಈ ಸರಳ ಸಮಾರಂಭದ ಜತೆ ಕಾರ್ಯಕರ್ತರು ಭಾಗಿಯಾಗಲು ಪಕ್ಷ ಅನುವು ಮಾಡಿಕೊಟ್ಟಿದೆ. ಟಿವಿ ಹಾಗೂ ಝೂಮ್​ ಆ್ಯಪ್​ ಮುಖಾಂತರ ಕಾರ್ಯಕ್ರಮ ವೀಕ್ಷಣೆ ಮಾಡಿ ಪರೋಕ್ಷವಾಗಿ ಕಾರ್ಯಕರ್ತರು ಭಾಗಿಯಾಗಿ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಕರೆ ನೀಡಿದ್ದಾರೆ.

DKC will be sworn in as KPCC president
ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಪ್ರಮಾಣ ವಚನ

By

Published : May 26, 2020, 10:58 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕಾರ ಮಾಡುವ ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್​​ನ ಪದಾಧಿಕಾರಿಗಳು ಭಾಗಿಯಾಗಬೇಕು ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಕರೆ ನೀಡಿದ್ದಾರೆ.

ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರ ಅಧಿಕಾರ ಸ್ವೀಕಾರ ಸಮಾರಂಭ ಮುಂದೂಡಿ, ಜೂ.7ರಂದು ನಡೆಸಲಾಗುತ್ತಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಸಾಮೂಹಿಕವಾಗಿ ಮತ್ತು ಪರೋಕ್ಷವಾಗಿ ಕಾರ್ಯಕ್ರಮ ಜರುಗುವ ವೇಳೆ ಏಕಕಾಲದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಪಕ್ಷದ ವತಿಯಿಂದ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಡಾ. ಪುಷ್ಪ ಅಮರನಾಥ್ ತಿಳಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್

ಬೆಂಗಳೂರಿನಲ್ಲಿ ಕೆಲವೇ ಮುಖಂಡರ ಸಮ್ಮುಖದಲ್ಲಿ ನಡೆಯುವ ಸರಳ ಸಮಾರಂಭಕ್ಕೆ ತಾವೆಲ್ಲರೂ ತಮ್ಮ-ತಮ್ಮ ಜಿಲ್ಲಾ ಪಂಚಾಯಿತಿ ಕ್ಷೇತ್ರ , ಕಾರ್ಪೊರೇಷನ್ ವಾರ್ಡ್, ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿ‌ಗಳಲ್ಲಿ ಇದ್ದುಕೊಂಡು ಭಾಗಿಯಾಗಬಹುದು.

ಕಾರ್ಯಕ್ರಮ ಟಿವಿ ಹಾಗೂ ಝೂಮ್​ ಆ್ಯಪ್​ನಲ್ಲಿ ವೀಕ್ಷಣೆ ಮಾಡಬಹುದಾಗಿದ್ದು, ಈ ಮುಖಾಂತರ ಎಲ್ಲರೂ ಭಾಗಿಯಾಗಬೇಕು ಎಂದು ಸೂಚಿಸಿದ್ದಾರೆ.

ABOUT THE AUTHOR

...view details