ಬೆಂಗಳೂರು:ಶಂಕರ್ ನಮ್ಮ ಪಕ್ಷದ ಸದಸ್ಯರು. ಈ ಹಿಂದೆ ಅವರನ್ನು ನಮ್ಮ ಪಕ್ಷಕ್ಕೆ ವಿಲೀನ ಮಾಡಿಕೊಂಡಿದ್ದೇವೆ. ಹೀಗಾಗಿ ಬಿಜೆಪಿಯವರು ಶಂಕರ್ ಬೆಂಬಲವನ್ನು ಪಡೆಯಲು ಸಾಧ್ಯವಿಲ್ಲ. ಬಿಜೆಪಿಗೆ ಸರ್ಕಾರ ರಚನೆಗೆ ಬೇಕಾದಷ್ಟು ಸದಸ್ಯರಿದ್ದರೆ ವಿಶ್ವಾಸಮತ ಯಾಚನೆಗೆ ಯಾಕಿಷ್ಟು ಅವಸರ ಮಾಡುತ್ತಿದ್ದಾರೆ. ಎರಡು ದಿನ ತಡವಾದರೆ ಏನಂತೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬಿಜೆಪಿಗೆ ಹೆಚ್ಚು ಸದಸ್ಯರಿದ್ದರೆ ಮತ್ಯಾಕೆ ಇಷ್ಟೊಂದು ಅವಸರ: ಡಿಕೆಶಿ ಪ್ರಶ್ನೆ
ವಿಶ್ವಾಸ ಮತಯಾಚನೆ ಇಂದೋ ನಾಳೆಯೋ ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟವಾದ ಉತ್ತರ ಸಿಗುತ್ತಿಲ್ಲ. ಇದೇ ನಿಟ್ಟಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಎಲ್ಲರೂ ಮಾತಾಡಬೇಕು ಅವರಿಗೆ ಸಮಯಾವಕಾಶ ಬೇಕಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ತಿಳಿಸಿದರು.
ಡಿಕೆ ಶಿವಕುಮಾರ್
ಸದನಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ವಾಸಮತ ಯಾಚನೆ ಇಂದೋ ನಾಳೆಯೋ ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟವಾದ ಉತ್ತರ ಸಿಗುತ್ತಿಲ್ಲ ಎಂದರು. ಎಲ್ಲರೂ ಮಾತಾಡಬೇಕು, ಅವರಿಗೆ ಸಮಯಾವಕಾಶ ಬೇಕಾಗಿದೆ ಎಂದು ತಿಳಿಸಿದರು.
ಇಂದು ಏನಾಗುತ್ತದೆ ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರ ನೀಡಿದ ಟ್ರಬಲ್ ಶೂಟರ್, ನಾನು ಆಶಾವಾದಿ. ಜ್ಯೋತಿಷಿ ಅಲ್ಲವೆಂದರು. ಇನ್ನು ಸ್ಪೀಕರ್ ಅವರ ಅಧಿಕಾರ ಹಾಗೂ ನಿರ್ಧಾರದ ಬಗ್ಗೆ ನಾನು ಮಾಧ್ಯಮಗಳ ಮುಖಾಂತರ ಮಾತನಾಡಲು ಇಚ್ಛಿಸುವುದಿಲ್ಲ. ಎಲ್ಲವನ್ನೂ ಸ್ಪೀಕರ್ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.