ಕರ್ನಾಟಕ

karnataka

ETV Bharat / state

ರಮೇಶ್ ಕುಮಾರ್ ವಿವಾದಿತ ಹೇಳಿಕೆಗೆ ಡಿಕೆಶಿ ಖಂಡನೆ.. ಮಹಿಳಾ ಸಮುದಾಯಕ್ಕೆ ಕ್ಷಮೆ ಕೋರಿದ ಕೆಪಿಸಿಸಿ ಅಧ್ಯಕ್ಷ - ಕ್ಷಮೇ ಕೋರಿದ ಡಿಕೆ ಶಿವಕುಮಾರ, ​,

ಮಾಜಿ ಸ್ಪೀಕರ್​ ರಮೇಶ್ ಕುಮಾರ್ ವಿವಾದಿತ ಹೇಳಿಕೆಗೆ ಡಿ ಕೆ ಶಿವಕುಮಾರ್ ಖಂಡನೆ ವ್ಯಕ್ತಪಡಿಸಿ ಮಹಿಳಾ ಸಮುದಾಯದ ಕ್ಷಮೆ ಕೋರಿದ್ದಾರೆ.

DK Shivakumar condemns controversial statement, Ramesh Kumar controversial statement, Congress KPCC president, State assembly, DK Shivakumar said sorry, Ramesh kumar said sorry, ವಿವಾದಿತ ಹೇಳಿಕೆಗೆ ಡಿಕೆ ಶಿವಕುಮಾರ್ ಖಂಡನೆ, ರಮೇಶ್​ ಕುಮಾರ್​ ವಿವಾದಿತ ಹೇಳಿಕೆ, ಕಾಂಗ್ರೆಸ್​ ಕೆಪಿಸಿಸಿ ಅಧ್ಯಕ್ಷ, ಕ್ಷಮೇ ಕೋರಿದ ಡಿಕೆ ಶಿವಕುಮಾರ, ಕ್ಷಮೇ ಕೇಳಿದ ರಮೇಶ್​ ಕುಮಾರ್​,
ರಮೇಶ್ ಕುಮಾರ್ ವಿವಾದಿತ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಖಂಡನೆ

By

Published : Dec 18, 2021, 7:56 AM IST

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಪಕ್ಷದ ಶಾಸಕರೊಬ್ಬರ ಮಾತುಗಳನ್ನು ಪ್ರದೇಶ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರಣಿ ಟ್ವೀಟ್ ಮಾಡಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಕಾಂಗ್ರೆಸ್ ಪಕ್ಷವು ಲಿಂಗ ಸಮಾನತೆ ಪ್ರತಿಪಾದಿಸುತ್ತದೆ. ಮಹಿಳೆಯರ ಘನತೆಯನ್ನು ಎತ್ತಿಹಿಡಿಯುತ್ತಾ ಬಂದಿದೆ. ಆದರೆ, ನಮ್ಮದೇ ಪಕ್ಷದ ಶಾಸಕರೊಬ್ಬರು ಮಹಿಳೆಯರ ಬಗ್ಗೆ ಕೀಳು ಅಭಿರುಚಿಯ ಮಾತನಾಡಿರುವುದು ತಪ್ಪು ಎಂದು ಟ್ವೀಟ್​ ಮಾಡಿದ್ದಾರೆ.

ಓದಿ:ಸಂಗೊಳ್ಳಿ ರಾಯಣ್ಣ ಪುತ್ಥಳಿ ಕೆಡವಿ ಪುಂಡರ ಅಟ್ಟಹಾಸ.. ಬೆಳಗಾವಿಯಲ್ಲಿ ಪರಿಸ್ಥಿತಿ ಉದ್ವಿಗ್ನ

ಶಾಸನಸಭೆಯಲ್ಲಿ ನಮ್ಮ ಪಕ್ಷದ ಶಾಸಕರೊಬ್ಬರ ಮಾತುಗಳು ವೈಯಕ್ತಿಕವಾಗಿ ನನಗೆ ಆಘಾತ ತಂದಿದೆ. ಈ ಘಟನೆಗಾಗಿ ನಾಡಿನ ಮಹಿಳಾ ಸಮುದಾಯದ ಕ್ಷಮೆಯಾಚಿಸುತ್ತೇನೆ ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸುವುದಾಗಿ ತಿಳಿಸಿದ್ದಾರೆ.

ಕಳೆದ ಗುರುವಾರ ವಿಧಾನಸಭೆಯಲ್ಲಿ ಆಡಿದ ಮಾತುಗಳಿಗಾಗಿ ಸಂಬಂಧಪಟ್ಟ ಶಾಸಕರು ಈಗಾಗಲೇ ಸದನದ ಮೂಲಕವೇ ಕ್ಷಮೆಯಾಚಿಸಿದ್ದಾರೆ. ಸಾರ್ವಜನಿಕ ಬದುಕಿನಲ್ಲಿರುವ ನಮ್ಮೆಲ್ಲರ ನಡವಳಿಕೆ ಸಮಾಜಕ್ಕೆ ಮಾದರಿಯಾಗಿರಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಶಾಸನಸಭೆ ಪ್ರಜಾತಂತ್ರದ ದೇಗುಲ. ಜನಪ್ರತಿನಿಧಿಗಳಾಗಿ ಸದನದಲ್ಲಿ ನಮ್ಮ ಮಾತು, ನಡವಳಿಕೆ ಶುದ್ಧವಾಗಿರಬೇಕು. ಆದರ್ಶದ ನಡವಳಿಕೆಯನ್ನು ರಾಜಕೀಯ ಬದುಕಿನಲ್ಲಿರುವ ನಾವೆಲ್ಲರೂ ಎಚ್ಚರಿಕೆಯಿಂದ ಪಾಲನೆ ಮಾಡಬೇಕು ಎಂದು ತಿಳಿಸಿದರು.

ರಮೇಶ್ ಕುಮಾರ್ ಹೇಳಿಕೆಗೆ ಸ್ವಪಕ್ಷೀಯ ನಾಯಕರಿಂದಲೇ ಖಂಡನೆ ವ್ಯಕ್ತವಾಗುತ್ತಿದೆ. ಸಾಕಷ್ಟು ನಾಯಕರು ರಮೇಶ್​ಕುಮಾರ್ ಹೇಳಿಕೆಯನ್ನು ಖಂಡಿಸಿ ಪ್ರತಿಕ್ರಿಯೆ ನೀಡಿದ್ದಾರೆ.

ABOUT THE AUTHOR

...view details