ಕರ್ನಾಟಕ

karnataka

ETV Bharat / state

ಇಡಿ ಬಂಧನ ವಿರುದ್ಧ ಹೈಕೋರ್ಟ್​ಗೆ ಡಿಕೆಶಿ ಮೇಲ್ಮನವಿ.. ಸೆಪ್ಟೆಂಬರ್‌ 11ಕ್ಕೆ ವಿಚಾರಣೆ - ಡಿಕೆಶಿ

ನವದೆಹಲಿಯ ಫ್ಲ್ಯಾಟ್‌ಗಳಲ್ಲಿ ದೊರೆತ 8.60 ಕೋಟಿ ರೂ. ಲೆಕ್ಕವಿಲ್ಲದ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವ ವಿಚಾರಣೆ ವಿರುದ್ಧ ಪ್ರಭಾವಿ ರಾಜಕಾರಣಿ ಡಿ ಕೆ ಶಿವಕುಮಾರ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಡಿಕೆಶಿ ಮೇಲ್ಮನವಿ

By

Published : Sep 9, 2019, 1:56 PM IST

ಬೆಂಗಳೂರು: ತಮ್ಮ ಮೇಲ್ಮನವಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತುಕೊಳ್ಳಬೇಕೆಂದು ಡಿಕೆಶಿ ಕೋರ್ಟ್​ಗೆ ಮನವಿ ಮಾಡಿದ್ದು, ಈ ಬಗ್ಗೆ ಇಂದು ಪರಿಶೀಲನೆ ನಡೆಸಿದ ನ್ಯಾಯಾಲಯ ಸೆಪ್ಟೆಂಬರ್ 11ಕ್ಕೆ ವಿಚಾರಣೆ ನಿಗದಿಪಡಿಸಿ ಆದೇಶ ಹೊರಡಿಸಿದೆ.

2017ರ ಅಗಸ್ಟ್‌ 2ರಂದು ಆದಾಯ ತೆರಿಗೆ (ಐಟಿ)ಅಧಿಕಾರಿಗಳು ಡಿ ಕೆ ಶಿವಕುಮಾರ್‌ಗೆ ಸೇರಿದ ಬೆಂಗಳೂರು ಮತ್ತು ನವದೆಹಲಿಯ ಮನೆಗಳ ಮೇಲೆ ದಾಳಿ ಮಾಡಿ ₹ 8,59,69,100 ಮೊತ್ತವನ್ನು ಜಪ್ತಿ ಮಾಡಿದ್ದರು. ಡಿ ಕೆ ಶಿವಕುಮಾರ್, ಸಚಿನ್‌ ನಾರಾಯಣ, ಸುನಿಲ್‌ಕುಮಾರ್‌ ಶರ್ಮಾ, ಆಂಜನೇಯ, ಹನುಮಂತಯ್ಯ ಮತ್ತು ರಾಜೇಂದ್ರ ವಿರುದ್ಧ ಆದಾಯ ತೆರಿಗೆ ಕಾಯ್ದೆ–1961ರ ಕಲಂ 277 ಮತ್ತು 278 ಹಾಗೂ ಭಾರತೀಯ ದಂಡ ಸಂಹಿತೆಯ ಕಲಂ 120 ಬಿ, 193 ಹಾಗೂ 199ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿಗೊಳಿಸಿತ್ತು. ನಾಲ್ಕು ವಿಚಾರಣೆ ಕೂಡ ನಡೆಸಿತ್ತು. ಆದರೆ, ವಿಚಾರಣೆಗೆ ಸಹಕರಿಸುತ್ತಿಲ್ಲ ಅಂತಾ ಡಿಕೆಶಿಯವರನ್ನ ಬಂಧಿಸಿ ಇಡಿ ವಿಚಾರಣೆ ನಡೆಸುತ್ತಿದೆ.

ABOUT THE AUTHOR

...view details