ಕರ್ನಾಟಕ

karnataka

ETV Bharat / state

ಆಷಾಢ ಮಾಸದ ನಂತರ ಜಿಲ್ಲಾ ಪ್ರವಾಸಕ್ಕೆ ಜೆಡಿಎಸ್ ಸಿದ್ಧತೆ : ಹೆಚ್ ಡಿ ಕುಮಾರಸ್ವಾಮಿ - Bangalore

ಮೈತ್ರಿ ಸರ್ಕಾರದ ಪತನದ ನಂತರ ಚುನಾವಣೆಯಲ್ಲಿ ಸೋತಿದ್ದೇವೆ. ಕೋವಿಡ್ ಎರಡನೇ ಅಲೆಯಲ್ಲಿ ಪಕ್ಷದ ಸಂಘಟನೆಯಲ್ಲಿ ಹಿಂದೆ ಇದ್ದೇವೆ. ಕಳೆದ ಐದು ದಿನಗಳಿಂದ ಸಭೆ ನಡೆಸಲಾಗುತ್ತಿದೆ. 2008ರಿಂದ ಈ ಪಕ್ಷದ ಸಂಘಟನೆಯ ಜವಾಬ್ದಾರಿವಹಿಸಿದ ನಂತರ ಹಲವಾರು ಸಭೆ ಮಾಡಿದ್ದೇನೆ..

HD Kumaraswamy
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

By

Published : Jul 23, 2021, 3:13 PM IST

ಬೆಂಗಳೂರು :ಆಷಾಢ ಮಾಸ ಮುಗಿಯುತ್ತಿದ್ದಂತೆ ಪಕ್ಷ ಸಂಘಟನೆ ಬಲಪಡಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಪ್ರವಾಸ ಕೈಗೊಳ್ಳಲು ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಜಿಲ್ಲಾವಾರು ಸಭೆಗೂ ಮುನ್ನ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದರು.

ಜಿಲ್ಲಾವಾರು ಸಭೆಗಳನ್ನು ನಡೆಸಲಾಗಿದೆ. ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು ಹೆಚ್ಚು ಉತ್ಸಾಹ ತೋರಿಸುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಜಿಲ್ಲಾವಾರು ಪ್ರವಾಸ ನಡೆಸುವ ಬಗ್ಗೆ ಯೋಜನೆ ಇದೆ ಎಂದರು. ಇಂದು ಬೆಂಗಳೂರು ನಗರದ ಪ್ರಮುಖ ಮುಖಂಡರ ಸಭೆ ಕರೆಯಲಾಗಿದೆ. ಬಿಬಿಎಂಪಿ ಚುನಾವಣೆ ಹಾಗೂ ಪಕ್ಷ ಸಂಘಟನೆಯ ಕುರಿತು ಚರ್ಚೆ ನಡೆಸಲಾಗುತ್ತದೆ. ನನಗೆ ಆತ್ಮವಿಶ್ವಾಸ ಮೂಡಿದೆ ಎಂದರು.

ಆಷಾಢ ಮಾಸದ ನಂತರ ಜಿಲ್ಲಾ ಪ್ರವಾಸ- ಹೆಚ್.ಡಿ.ಕುಮಾರಸ್ವಾಮಿ

ಮೈತ್ರಿ ಸರ್ಕಾರದ ಪತನದ ನಂತರ ಚುನಾವಣೆಯಲ್ಲಿ ಸೋತಿದ್ದೇವೆ. ಕೋವಿಡ್ ಎರಡನೇ ಅಲೆಯಲ್ಲಿ ಪಕ್ಷದ ಸಂಘಟನೆಯಲ್ಲಿ ಹಿಂದೆ ಇದ್ದೇವೆ. ಕಳೆದ ಐದು ದಿನಗಳಿಂದ ಸಭೆ ನಡೆಸಲಾಗುತ್ತಿದೆ. 2008ರಿಂದ ಈ ಪಕ್ಷದ ಸಂಘಟನೆಯ ಜವಾಬ್ದಾರಿವಹಿಸಿದ ನಂತರ ಹಲವಾರು ಸಭೆ ಮಾಡಿದ್ದೇನೆ.

ಆದರೆ, ಕಳೆದ ಐದು ದಿನಗಳಲ್ಲಿ ಮಾಡಿದ ಸಭೆಯಲ್ಲಿ ಕಾರ್ಯಕರ್ತರ ಉತ್ಸಾಹ ನೋಡಿದ್ದೇನೆ. ಕಾರ್ಯಕರ್ತರಲ್ಲಿ ಜೋಶ್ ಕಾಣುತ್ತಿದ್ದೇನೆ. ಮೊದಲ ಹಂತದಲ್ಲಿ ಸಭೆಯನ್ನು ಪಕ್ಷದ ಕಚೇರಿಯಲ್ಲಿ ಮಾಡುತ್ತಿದ್ದೇವೆ. ಎರಡನೇ ಹಂತದಲ್ಲಿ ಸಭೆಗಳನ್ನು ಮಾಡಲು ಆಷಾಢದ ನಂತರದಲ್ಲಿ ಪ್ಲಾನ್ ಮಾಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಇದನ್ನೂ ಓದಿ:ಆಷಾಢ ಮಾಸದ ರಜಾ ದಿನಗಳಂದು ಚಾಮುಂಡಿ ಬೆಟ್ಟಕ್ಕೆ ಪ್ರವೇಶವಿಲ್ಲ: ಜಿಲ್ಲಾಧಿಕಾರಿ

ABOUT THE AUTHOR

...view details