ಕರ್ನಾಟಕ

karnataka

ಬಿಬಿಎಂಪಿ ಚುನಾವಣೆ ತಯಾರಿ ಕುರಿತು‌ ಚರ್ಚೆ ನಡೆದಿದೆ: ಕೃಷ್ಣ ಬೈರೇಗೌಡ

By

Published : Feb 18, 2021, 5:19 PM IST

ಬೆಂಗಳೂರು ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದೆ. ಆದರೆ ಕಳೆದ ಎರಡು ವರ್ಷದಿಂದ ಬಿಜೆಪಿ ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಶೀಘ್ರವಾಗಿ ಬಿಬಿಎಂಪಿ ಚುನಾವಣೆ ಆಗಬೇಕು. ಚುನಾವಣೆ ತಯಾರಿ ಕುರಿತು‌ ಚರ್ಚೆ ನಡೆದಿದೆ. ಕಾಂಗ್ರೆಸ್ ಪ್ರತ್ಯೇಕ ರೂಪುರೇಷೆಗೆ ನಿರ್ಧರಿಸಿದೆ ಎಂದು ಮಾಜಿ‌ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ

ಬೆಂಗಳೂರು:ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ದೂರದೃಷ್ಟಿ ಇಟ್ಟುಕೊಂಡು ರೂಪುರೇಷೆ ಕೊಡಲು ಇಲ್ಲಿನ ಶಾಸಕರ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಚರ್ಚಿಸುತ್ತಿದ್ದಾರೆ ಎಂದು ಮಾಜಿ‌ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಬೆಂಗಳೂರಿನ ಕುಮಾರಕೃಪ ಅತಿಥಿಗೃಹದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬೆಂಗಳೂರು ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದೆ. ಆದರೆ, ಕಳೆದ ಎರಡು ವರ್ಷದಿಂದ ಬಿಜೆಪಿ ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಶೀಘ್ರವಾಗಿ ಬಿಬಿಎಂಪಿ ಚುನಾವಣೆ ಆಗಬೇಕು. ಚುನಾವಣೆ ತಯಾರಿ ಕುರಿತು‌ ಚರ್ಚೆ ನಡೆದಿದೆ. ಕಾಂಗ್ರೆಸ್ ಪ್ರತ್ಯೇಕ ರೂಪುರೇಷೆಗೆ ನಿರ್ಧರಿಸಿದೆ ಎಂದರು.

ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ

ಓದಿ..ಸಂಪತ್​​​ ರಾಜ್​​​​ ವಿರುದ್ಧ ಕ್ರಮ ’ಕೈ’ಗೊಳ್ಳಲು 'ರಾಜ್ಯ ಉಸ್ತುವಾರಿ'ಗೆ ಜಮೀರ್ ಮನವಿ

ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರ ಮಾತನಾಡಿ, ಈಗಾಗಲೇ ಸುಮಾರು ಚರ್ಚೆ ನಡೆದಿದೆ. ಹೊಸಕೋಟೆ ಮುಖಂಡರ ಜೊತೆ ಚರ್ಚಿಸಿದ್ದೇವೆ. ನಮ್ಮ‌ ಕಾರ್ಯಕರ್ತರ ಸಲಹೆ ಪಡೆದುಕೊಂಡಿದ್ದೇವೆ. ಶರತ್ ಕೂಡ ನಮ್ಮ‌ ನಾಯಕರನ್ನ ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿದ್ದಾರೆ. ಇಂದು ಸುರ್ಜೇವಾಲಾರನ್ನ ಭೇಟಿ ಮಾಡಬಹುದು. ಯಾವಾಗ ಸೇರಬೇಕೆಂದು ನಂತರ ನಿರ್ಧಾರವಾಗಲಿದೆ. ಸಿಎಲ್​ಪಿ, ಕೆಪಿಸಿಸಿ ಅಧ್ಯಕ್ಷರು ಒಪ್ಪಿಗೆ ಕೊಟ್ಟಿದ್ದಾರೆ ಎಂದು ಹೇಳಿದರು.

ABOUT THE AUTHOR

...view details