ಕರ್ನಾಟಕ

karnataka

ETV Bharat / state

ಒಂದು ಸಮಾಜ ನಿಮ್ಮ ಕೈ ಬಿಡುತ್ತೆ ಅಂತ ಸ್ವಾಮೀಜಿ ಹೇಳಬಾರದಿತ್ತು : ದಿನೇಶ್ ಗುಂಡೂರಾವ್ - ದಿನೇಶ್ ಗುಂಡೂರಾವ್

ನಿನ್ನೆ ಹರಿಹರ ಜಾತ್ರೆಯಲ್ಲಿ ಸ್ವಾಮೀಜಿ ಮಾತನಾಡಿದ್ದು ತಪ್ಪು, ಒಂದು ಸಮಾಜ ನಿಮ್ಮ ಕೈ ಬಿಡತ್ತೆ ಅಂತ ಸ್ವಾಮಿಜಿ ಹೇಳಬಾರದಿತ್ತು. ಸ್ವಾಮೀಜಿಗಳು ಆ ರೀತಿ ಒತ್ತಡ ಹಾಕುವುದು ಸರಿಯಲ್ಲವೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

dinesh gundurao reacted to swamiji attitude on cm yadiyurappa
ಒಂದು ಸಮಾಜ ನಿಮ್ಮ ಕೈ ಬಿಡುತ್ತೆ ಅಂತ ಸ್ವಾಮೀಜಿ ಹೇಳಬಾರದಿತ್ತು : ದಿನೇಶ್ ಗುಂಡೂರಾವ್

By

Published : Jan 15, 2020, 3:34 PM IST

ಬೆಂಗಳೂರು:ನಿನ್ನೆ ಹರಿಹರ ಜಾತ್ರೆಯಲ್ಲಿ ಸ್ವಾಮೀಜಿ ಮಾತನಾಡಿದ್ದು ತಪ್ಪು, ಒಂದು ಸಮಾಜ ನಿಮ್ಮ ಕೈ ಬಿಡತ್ತೆ ಅಂತ ಸ್ವಾಮಿಜಿ ಹೇಳಬಾರದಿತ್ತು. ಸ್ವಾಮೀಜಿಗಳು ಆ ರೀತಿ ಒತ್ತಡ ಹಾಕುವುದು ಸರಿಯಲ್ಲವೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಒಂದು ಸಮಾಜ ನಿಮ್ಮ ಕೈ ಬಿಡುತ್ತೆ ಅಂತ ಸ್ವಾಮೀಜಿ ಹೇಳಬಾರದಿತ್ತು : ದಿನೇಶ್ ಗುಂಡೂರಾವ್

ತಮಿಳು ಕವಿ ತಿರುವಳ್ಳುವರ್ ಜಯಂತಿ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುವಳ್ಳುವರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಹಜವಾಗಿ ಯಡಿಯೂರಪ್ಪ ಸ್ವಾಮೀಜಿ ಮಾತಿನಿಂದ ಕೆರಳಿದ್ದಾರೆ. ಯಡಿಯೂರಪ್ಪಗೆ ಎರಡೂ ಕಡೆಗಳಿಂದ ಒತ್ತಡವಿದೆ. ಒತ್ತಡದಿಂದಾಗಿಯೇ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಯಡಿಯೂರಪ್ಪ ಸಿಎಂ ಆಗಿ ಇಷ್ಟು ತಿಂಗಳಾಯ್ತು ಇದುವರೆಗೆ ಅಧಿವೇಶನ ಪೂರ್ಣ ಪ್ರಮಾಣದಲ್ಲಿ ನಡೆಸಿಯೇ ಇಲ್ಲ. ಯಡಿಯೂರಪ್ಪಗೆ, ಬಿಜೆಪಿಗೆ ಚರ್ಚೆ ಮಾಡುವುದು ಬೇಕಿಲ್ಲ ಎಂದರು.

ಇದೇ ಸಂದರ್ಭ ಕೆಪಿಸಿಸಿ ಅಧ್ಯಕ್ಷ ಆಯ್ಕೆಗೆ ಇನ್ನೂ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಬಹಳ ದಿನ ಹಾಗೇ ಬಿಡುವುದು ಒಳ್ಳೆಯದಲ್ಲ. ನಾನಂತೂ ರಾಜೀನಾಮೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಹೈಕಮಾಂಡ್ ಯಾರನ್ನೇ ನೇಮಿಸಿದರೂ ಅವರಿಗೆ ಸಹಕಾರ ಕೊಟ್ಟಯ ಕೆಲಸ ಮಾಡುತ್ತೇನೆ. ಮೊದಲೇ ಸರ್ಕಾರದ ಅಭಿವೃದ್ಧಿ ಹಳ್ಳ ಹಿಡಿದು ಹೋಗಿದೆ. ಈ ಸಂದರ್ಭದಲ್ಲಿ ವಿರೋಧ ಪಕ್ಷವಾದ ನಾವೂ ಗಟ್ಟಿಯಾಗಿ ಇದನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ತಕ್ಷಣವೇ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಮಾಡುವುದು ಒಳ್ಳೆಯದು. ಎಚ್ ಕೆ ಪಾಟೀಲ್, ಮುನಿಯಪ್ಪ ಸೇರಿ ನಾಯಕರೆಲ್ಲ ಸಭೆ ಸೇರಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

ABOUT THE AUTHOR

...view details