ಕರ್ನಾಟಕ

karnataka

ETV Bharat / state

ಡಿಕೆಶಿ ಬೆಂಗಳೂರಿಗೆ ಬರುವುದು ಶನಿವಾರವಂತೆ: ದೆಹಲಿಯಲ್ಲಿ ಸೋನಿಯಾ ಸೇರಿ ಕೆಲ ನಾಯಕರ ಭೇಟಿ - ಶಿವಕುಮಾರ್ ಬೆಂಗಳೂರಿಗೆ ಬರುವ ದಿನಾಂಕದಲ್ಲಿ ಬದಲಾವಣೆ

ಮಾಜಿ ಸಚಿವ ಡಿ.ಕೆ.ಶಿವಕುಮಾರ್​​ ಬೆಂಗಳೂರಿಗೆ ಬರುವ ದಿನಾಂಕದಲ್ಲಿ ಬದಲಾವಣೆಯಾಗಿದೆ. ಶನಿವಾರ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಕೆಪಿಸಿಸಿಗೆ ಬರಲಿದ್ದಾರೆ ಎಂಬ ಮಾಹಿತಿ ಇದೆ.

ದೆಹಲಿಯಲ್ಲಿ ವಿವಿಧ ನಾಯಕರ ಭೇಟಿ ಮಾಡಿದ ಡಿಕೆಶಿ

By

Published : Oct 24, 2019, 7:59 PM IST

ಬೆಂಗಳೂರು:ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬೆಂಗಳೂರಿಗೆ ಬರುವ ದಿನಾಂಕದಲ್ಲಿ ಬದಲಾವಣೆ ಆಗಿದೆ.

ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ ಈಗ ಅವರು ಶನಿವಾರ ಮಧ್ಯಾಹ್ನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ ಹಾಗೂ ಅಲ್ಲಿಂದ ಕೆಪಿಸಿಸಿ ಕಚೇರಿಗೆ ಬರಲಿದ್ದಾರೆ ಎಂಬ ಮಾಹಿತಿ ಇದೆ.

ದೆಹಲಿಯಲ್ಲಿ ಕೈ ನಾಯಕರನ್ನು ಭೇಟಿ ಮಾಡಿದ ಡಿಕೆಶಿ

ಮುಖಂಡರ ಭೇಟಿ:

ಇಂದು ಮಧ್ಯಾಹ್ನ ದೆಹಲಿಯ ಎಐಸಿಸಿ ಕಚೇರಿಗೆ ಭೇಟಿ ಕೊಟ್ಟಿದ್ದ ಡಿ.ಕೆ.ಶಿವಕುಮಾರ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಸಂಜೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಶಾಸಕ ಡಾ. ರಂಗನಾಥ್ ಭೇಟಿ ಮಾಡಿ ಧನ್ಯವಾದ ಹೇಳಿದರು.

ABOUT THE AUTHOR

...view details