ಕರ್ನಾಟಕ

karnataka

ETV Bharat / state

ಭಾರತ್​ ಬಂದ್​: ಅನ್ನದ ತಟ್ಟೆ ಹಿಡಿದವನ ಬಾಯಿ, ಕಣ್ಣು ಮುಚ್ಚಿ ರೈತರ ಆಕ್ರೋಶ - Protest in Bangalore

ಬೆಂಗಳೂರು ನಗರದ ವಿವಿಧೆಡೆ ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಅನ್ನದ ತಟ್ಟೆ ಹಿಡಿದು ತಿನ್ನಲು ಕೂತವನ ಬಾಯಿ ಹಾಗೂ ಕಣ್ಣು ಮುಚ್ಚಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Protest in Bangalore
ವಿಭಿನ್ನ ರೀತಿಯಲ್ಲಿ ಪ್ರತಿಭಟನೆ: ಅನ್ನದ ತಟ್ಟೆ ಹಿಡಿದು ತಿನ್ನಲು ಕೂತವನ ಬಾಯಿ, ಕಣ್ಣು ಮುಚ್ಚಿ ಆಕ್ರೋಶ

By

Published : Dec 8, 2020, 12:18 PM IST

ಬೆಂಗಳೂರು: ನಗರದ ವಿವಿಧೆಡೆ ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಮೈಸೂರು ಬ್ಯಾಂಕ್ ವೃತ್ತದ ಮಧ್ಯೆ ರಸ್ತೆಯಲ್ಲಿ‌ ಕುಳಿತು ಕುರುಬೂರು ಶಾಂತಕುಮಾರ್ ಹಾಗೂ ಬೆಂಬಲಿಗರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಅನ್ನದ ತಟ್ಟೆ ಹಿಡಿದು ತಿನ್ನಲು ಕುಳಿತವನ ಬಾಯಿ ಹಾಗೂ ಕಣ್ಣು ಮುಚ್ಚಿ ಪ್ರತಿಭಟನೆ ನಡೆಸಿದರು. 'ಅನ್ನ ಕಿತ್ತು ಕೊಳ್ಳುವ ಸರ್ಕಾರಕ್ಕೆ ಧಿಕ್ಕಾರ' ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಕುರುಬೂರು ಶಾಂತಕುಮಾರ್

ಬಳಿಕ ಮಾತನಾಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್, ಕೋವಿಡ್ ಸಂಕಷ್ಟದಲ್ಲಿ ರೈತರ ಬದುಕು ಹಾಳಾಗಿದೆ. ಈ ಮಧ್ಯೆ ರೈತರ ಬದುಕನ್ನೇ ಹಾಳು ಮಾಡುವ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿದೆ. ಎಪಿಎಂಸಿ ಕಾಯ್ದೆ, ಭೂಸುಧಾರಣೆ ಹಾಗೂ ವಿದ್ಯುತ್ ಕಾಯ್ದೆ ರೈತರನ್ನ ನಾಶ ಮಾಡಲಿದೆ ಎಂದು ಕಿಡಿಕಾರಿದರು.

ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎನ್ನುವ ಸರ್ಕಾರ ರೈತರ ಆತ್ಮಹತ್ಯೆಯನ್ನು ದ್ವಿಗುಣ ಮಾಡಿದೆ. ದೇಶದ ಶ್ರೀಮಂತರ ಆದಾಯ ದ್ವಿಗುಣ ಆಗಿದೆ ಹೊರತು, ರೈತರು ಸಂಕಷ್ಟದಲ್ಲಿದ್ದಾರೆ ಎಂದು ಕುರುಬೂರು.

ABOUT THE AUTHOR

...view details