ಬೆಂಗಳೂರು: ವಿಜಯನಗರ ಪ್ರತ್ಯೇಕ ಜಿಲ್ಲೆಗೆ ಮನವಿ ನೀಡಲು ಬಂದಿದ್ದ ಶಾಸಕ ಕಂಪ್ಲಿ ಗಣೇಶ್ ಮತ್ತು ಆನಂದ್ ಸಿಂಗ್ ಇಬ್ಬರ ವರ್ತನೆ ಅವರು ಮುನಿಸು ಮರೆತು ಒಂದಾಗಿದ್ದಾರಾ? ಎಂಬ ಕುತೂಹಲ ಮೂಡಿಸಿದೆ.
ಆನಂದ್ ಸಿಂಗ್ ಕೈ ಕುಲುಕಿ ಮಾತನಾಡಿಸಿದ ಕಂಪ್ಲಿ ಗಣೇಶ್ : ದ್ವೇಷ ಮರೆತು ಒಂದಾದ್ರಾ..?
ವಿಜಯನಗರ ಪ್ರತ್ಯೇಕ ಜಿಲ್ಲೆಗೆ ಮನವಿ ನೀಡಲು ಬಂದಿದ್ದ ಶಾಸಕ ಕಂಪ್ಲಿ ಗಣೇಶ್ ಮತ್ತು ಆನಂದ್ ಸಿಂಗ್ ಇಬ್ಬರ ವರ್ತನೆ ಅವರು ಮುನಿಸು ಮರೆತು ಒಂದಾಗಿದ್ದಾರಾ? ಎಂಬ ಕುತೂಹಲ ಮೂಡಿಸಿದೆ.
ಕೈ ಕುಲುಕಿ, ಮಾತನಾಡಿಸಿದ ಕಂಪ್ಲಿ-ಸಿಂಗ್, ದ್ವೇಷ ಮರೆತರಾ ಒಂದಾದ್ರಾ..?
ಹೌದು, ಈ ಹಿಂದೆ ರೆಸಾರ್ಟ್ನಲ್ಲಿ ಗಲಾಟೆ ಮಾಡಿಕೊಂಡು ಬಹಳಷ್ಟು ಚರ್ಚೆಗೀಡಾಗಿದ್ದ ಈ ಇಬ್ಬರೂ ಈಗ ಮತ್ತೆ ಒಂದಾಗಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಸಿಎಂ ಭೇಟಿ ಬಳಿಕ ಗೃಹ ಕಚೇರಿಯಿಂದ ಮೊದಲು ಹೊರಟ ಕಂಪ್ಲಿ ಗಣೇಶ್, ತೆರಳುವ ಮುನ್ನ ಆನಂದ್ ಸಿಂಗ್‌ಗೆ ತಾವು ಹೊರಡುತ್ತಿರುವುದಾಗಿ ಹೇಳಿ ಕೈಕುಲುಕಿದ್ದು, ಅಷ್ಟೇ ಅಲ್ಲದೇ ಅದಕ್ಕೆ ಪ್ರತಿಕ್ರಿಯೆಯಾಗಿ ಆನಂದ್ ಸಿಂಗ್, ಕಂಪ್ಲಿ ಗಣೇಶ್ ಬೆನ್ನು ತಟ್ಟಿ ಆಯ್ತು ಎಂದಿದ್ದು.
Last Updated : Sep 18, 2019, 3:11 PM IST