ಕರ್ನಾಟಕ

karnataka

ETV Bharat / state

ಜನ್ಮದಿನದ ಸಂಭ್ರಮದ ಜೊತೆ ಮದುವೆ ಡೇಟ್​ ಅನೌನ್ಸ್ ಮಾಡಿದ ಧ್ರುವ ಸರ್ಜಾ - ಸ್ಯಾಂಡಲ್​ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಸ್ಯಾಂಡಲ್​ವುಡ್ ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ಜನ್ಮದಿನದ ಸಂಭ್ರಮದ ಜೊತೆ ಮದುವೆ ದಿನಾಂಕವನ್ನು ಪ್ರಕಟಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಖುಷಿ ಸುದ್ದಿಯನ್ನು ನೀಡಿದ್ದಾರೆ.

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

By

Published : Oct 6, 2019, 2:19 PM IST

ಬೆಂಗಳೂರು:ಸ್ಯಾಂಡಲ್​ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ 30ರ ಸಂಭ್ರಮ. ಪೊಗರಿನ ಹುಡುಗ 30ನೇ ವಸಂತಕ್ಕೆ ಕಾಲಿಟ್ಟಿದ್ದು, ಸಾವಿರಾರು ಅಭಿಮಾನಿಗಳ ಜೊತೆ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡರು.

ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಧ್ರುವ

ಮನೆ ಮುಂದೆ ನೆರೆದಿದ್ದ ಸಾವಿರಾರು ಅಭಿಮಾನಿಗಳ ಜೊತೆ ಧ್ರುವ ಹುಟ್ಟುಹಬ್ಬ ಆಚರಿಸಿಕೊಂಡರು. ಬಳಿಕ ನೆಚ್ಚಿನ ನಟನ ಜೊತೆ ಫ್ಯಾನ್ಸ್‌ ಫೋಟೋ ಕ್ಲಿಕ್ಕಿಸಿಕೊಂಡರು.

ಇದೇ ವೇಳೆ ಮಾತನಾಡಿದ ಧ್ರುವ ಸರ್ಜಾ, ಪೊಗರು ಚಿತ್ರ ಶೇ.35 ರಷ್ಟು ಚಿತ್ರೀಕರಣ ಮುಗಿಸಿದೆ ಎಂದು ತಿಳಿಸಿದರು. ಒಂದು ವರ್ಷದಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಅ.24 ರಂದು ಸಂಪೂರ್ಣ ಡೈಲಾಗ್​ಗಳನ್ನು ಹೊಂದಿರುವ ಟೀಸರ್ ರಿಲೀಸ್ ಆಗಲಿದೆ.

ಜೊತೆಗೆ ನ.24 , 25 ರಂದು ಹೊಸ ಜೀವನಕ್ಕೆ (ವಿವಾಹ) ಕಾಲಿಡುವ ಸುದ್ದಿಯನ್ನು ಸಹ ಧ್ರುವ ಸರ್ಜಾ ಹಂಚಿಕೊಂಡರು.

ABOUT THE AUTHOR

...view details