ದೇವನಹಳ್ಳಿ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಲೆ ಎತ್ತಿರುವ 108 ಆಡಿಗಳ ಕೆಂಪೇಗೌಡರ ಕಂಚಿನ ಪ್ರತಿಮೆ ಇಂದು ಮೋದಿಯವರಿಂದ ಲೋಕಾರ್ಪಣೆಯಾಗಿದೆ. ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರಾದ ನಿಸರ್ಗ ನಾರಾಯಣ ಸ್ವಾಮಿಯವರಿಗೆ ಆಹ್ವಾನ ನೀಡದೇ ಇದ್ದದ್ದು, ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದೇ ವಿಚಾರಕ್ಕೆ ದೇವನಹಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಪೇಗೌಡರು ಜಾತ್ಯತೀತ ನಾಯಕರಾಗಿದ್ದರು. ಕಸುಬು ಆಧಾರಿತ ಜಾತಿಗಳಿಗೆ ಪೇಟೆಗಳನ್ನ ಕಟ್ಟಿ ಅವರ ಅಭಿವೃದ್ಧಿಗೆ ಶ್ರಮಿಸಿದವರು.
ಅತಂಹ ಮಹಾನ್ ವ್ಯಕ್ತಿಯ 108 ಅಡಿಗಳ ಕಂಚಿನ ಪ್ರತಿಮೆ ನಿರ್ಮಾಣ ಮಾಡಿ, ಇಂದು ಪ್ರತಿಮೆ ಲೋಕಾರ್ಪಣೆ ಮಾಡುತ್ತಿರುವುದು ಸಂತಸ ಪಡುವ ಕೆಲಸವಾಗಿದೆ. ಆದರೆ ಪತ್ರಿಯೊಬ್ಬರು ಹಬ್ಬದಂತೆ ಮಾಡಬೇಕಾದ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕೇವಲ ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿದೆ.
ಕೆಂಪೇಗೌಡರ ಪ್ರತಿಮೆ ಶಂಕುಸ್ಥಾಪನೆ ಮತ್ತು ಥೀಮ್ ಪಾರ್ಕ್ ಗುದ್ದಲಿ ಪೂಜೆ ಕಾರ್ಯಕ್ರಮ ನನ್ನ ಅಧ್ಯಕ್ಷತೆಯಲ್ಲಿ ನಡೆಯಿತು. ಆದರೆ, ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರನ್ನ ಆಹ್ವಾನಿಸದೇ ಶಾಸಕ ಸ್ಥಾನಕ್ಕೆ ಅಗೌರವ ತರುವ ಕೆಲಸ ಮಾಡಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ವೈಫಲವೇ ಕಾರಣವಾಗಿದೆ.