ಬೆಂಗಳೂರು:ರಾಜ್ಯದಲ್ಲಿ ಕೊರೊನಾಗೆ ಮೂವರು ಬಲಿಯಾಗಿದ್ದು ಒಟ್ಟು ಸಾವಿನ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ 9 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 598ಕ್ಕೆ ತಲುಪಿದ್ದು, ಈವರೆಗೆ 255 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕೊರೊನಾಗೆ ದಾವಣಗೆರೆ, ಬೀದರ್, ಬೆಂಗಳೂರಿನಲ್ಲಿ ತಲಾ ಒಂದು ಬಲಿ: 25ಕ್ಕೆ ಏರಿದ ಸಾವಿನ ಸಂಖ್ಯೆ - ದಾವಣಗೆರೆ ಕೊರೊನಾ
ರಾಜ್ಯದಲ್ಲಿ ಹೊಸದಾಗಿ 9 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಮೂವರು ಸೋಂಕಿನಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ. ಇದರಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ 598ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 25 ಮುಟ್ಟಿದೆ.
ಕೊರೊನಾ
ಕೊರೊನಾ ಸೋಂಕಿಗೆ ಬಲಿಯಾದವರು:
- ರೋಗಿ ಸಂಖ್ಯೆ 566- ಇವರು 69 ವರ್ಷದ ದಾವಣಗೆರೆಯ ನಿವಾಸಿಯಾಗಿದ್ದು, ಉಸಿರಾಟದ ತೊಂದರೆ, ಸಕ್ಕರೆ ಕಾಯಿಲೆಯ ಕಾರಣಕ್ಕೆ ಏಪ್ರಿಲ್ 28ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೇ 1ರಂದು ಹೃದಯಾಘಾತದಿಂದ ಮೃತಪಟ್ಟಿದ್ದು, ಇವರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು.
- ರೋಗಿ ಸಂಖ್ಯೆ 590- ಬೀದರ್ನ 82 ವರ್ಷದ ವೃದ್ಧನಾಗಿದ್ದು ಏಪ್ರಿಲ್ 27ರಂದು ಸಂಜೆ ಆಸ್ಪತ್ರೆಗೆ ದಾಖಲಾಗಿ, ತೀವ್ರತರ ಉಸಿರಾಟದ ತೊಂದರೆಯಿಂದ ಏಪ್ರಿಲ್ 28ರಂದು ಮೃತಪಟ್ಟಿದ್ದರು. ಇವರಲ್ಲಿ ನಿನ್ನೆ ಕೊರೊನಾ ಸೋಂಕು ದೃಢವಾಗಿತ್ತು.
- ರೋಗಿ ಸಂಖ್ಯೆ 557- ಬೆಂಗಳೂರಿನ 63 ವರ್ಷದ ವ್ಯಕ್ತಿಯಾಗಿದ್ದು, ಮಧುಮೇಹ, ಮೂತ್ರಪಿಂಡ ವೈಫಲ್ಯತೆಯಿಂದ ಬಳಲುತ್ತಿದ್ದು ಡಯಾಲಿಸಿಸ್ ಸೇವೆ ಪಡೆಯುತ್ತಿದ್ದನು. ಕಿಮೋ ಥೆರಮಿ ಚಿಕಿತ್ಸೆ ಕೂಡಾ ಈ ವ್ಯಕ್ತಿಗೆ ನೀಡಲಾಗುತ್ತಿತ್ತು. ಏಪ್ರಿಲ್ 30 ರಂದು ದಾಖಲಾಗಿದ್ದು ಇಂದು ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾನೆ.
ರಾಜ್ಯದಲ್ಲಿ ಕೊರೊನಾ ಸೋಂಕು ಪತ್ತೆಯಾದವರ ವಿವರ: