ಕರ್ನಾಟಕ

karnataka

ETV Bharat / state

ತೀವ್ರ ವಿರೋಧ: ಸುತ್ತೋಲೆ ವಾಪಸ್ ಪಡೆದ ಡಿಸಿಪಿ ಸಿ ಕೆ ಬಾಬಾ

ಮನೆಯಲ್ಲಿ ಯಾರಾದರೂ ಮೃತಪಟ್ಟರೆ ಹಾಗೂ ಅನಾರೋಗ್ಯಕ್ಕೆ‌‌ ಒಳಗಾದರೆ ಮಾತ್ರ ರಜೆ ತೆಗೆದುಕೊಳ್ಳಬೇಕು.‌ ಸಕಾರಣವಿಲ್ಲದೇ ರಜೆ ತೆಗೆದುಕೊಳ್ಳುವ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು‌ ಡಿಸಿಪಿ‌ ಸಿ ಕೆ ಬಾಬಾ ಆದೇಶ ಹೊರಡಿಸಿದ್ದರು‌. ಕೆಳ ಹಂತದ ಪೊಲೀಸರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಆದೇಶ ಹಿಂಪಡೆದಿದ್ದಾರೆ.

ಡಿಸಿಪಿ ಸಿ ಕೆ ಬಾಬಾ
ಡಿಸಿಪಿ ಸಿ ಕೆ ಬಾಬಾ

By

Published : Nov 2, 2022, 4:20 PM IST

ಬೆಂಗಳೂರು:ರಜೆ ಕುರಿತಂತೆ ಆಗ್ನೇಯ ವಿಭಾಗದ ಡಿಸಿಪಿ ಹೊರಡಿಸಿದ್ದ ಆದೇಶ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸುತ್ತೋಲೆ ವಾಪಸ್ ಪಡೆದಿದ್ದಾರೆ.

ಮನೆಯಲ್ಲಿ ಯಾರಾದರೂ ಮೃತಪಟ್ಟರೆ ಹಾಗೂ ಅನಾರೋಗ್ಯಕ್ಕೆ‌‌ ಒಳಗಾದರೆ ಮಾತ್ರ ರಜೆ ತೆಗೆದುಕೊಳ್ಳಬೇಕು.‌ ಸಕಾರಣವಿಲ್ಲದೇ ರಜೆ ತೆಗೆದುಕೊಳ್ಳುವ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು‌ ಡಿಸಿಪಿ‌ ಸಿ ಕೆ ಬಾಬಾ ಆದೇಶ ಹೊರಡಿಸಿದ್ದರು‌. ಕೆಳ ಹಂತದ ಪೊಲೀಸರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಆದೇಶ ಹಿಂಪಡೆದಿದ್ದಾರೆ.

ಡಿಸಿಪಿ ಸಿ ಕೆ ಬಾಬಾ ಅವರು ಮಾತನಾಡಿದರು

ಈ ಬಗ್ಗೆ ಡಿಸಿಪಿ ಸಿ ಕೆ ಬಾಬಾ ಸ್ಪಷ್ಟನೆ ನೀಡಿದ್ದು, ಈ‌ ಆದೇಶ ಕೆಲ ಹಂತದ ಸಿಬ್ಬಂದಿಗೆ ಅನ್ವಯಿಸಲ್ಲ. ಎಸಿಪಿ ಮತ್ತು ಇನ್ಸ್​ಪೆಕ್ಟರ್​ಗಳಿಗೆ ಅನ್ವಯಿಸುತ್ತದೆ. ತುರ್ತು ಪರಿಸ್ಥಿತಿ ಇದ್ದಾಗ ರಜೆ ತೆಗೆದುಕೊಳ್ಳಬಹುದು. ಕೆಲ‌ ಪೊಲೀಸರು ರಜೆ ತೆಗೆದುಕೊಳ್ಳುವುದನ್ನ ಪ್ರವೃತ್ತಿ ಮಾಡಿಕೊಂಡಿದ್ದಾರೆ.

ಬಂದೋಬಸ್ತ್ , ಹಬ್ಬದ ಸಮಯದಲ್ಲಿ, ತುರ್ತು ಪರಿಸ್ಥಿತಿಯಲ್ಲಿ ನಮಗೆ ಪೊಲೀಸರ ಸಂಖ್ಯೆ ಕಡಿಮೆಯಾಗಿತ್ತು. ಈ ಹಿಂದೆ‌ ಆಂತರಿಕ ವಿಷಯದ ಬಗ್ಗೆ ಸಭೆ ಮಾಡಲಾಗಿತ್ತು. ಆಗ ಕೆಲ ಪೊಲೀಸರು ರಜೆ ಪಡೆದುಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಪೊಲೀಸ್ ಕಾನ್ಸ್‌ಟೇಬಲ್​ಗಳಿಗೆ ಈ ಆದೇಶ ಅನ್ವಯಿಸಲ್ಲ. ರಜೆ ತೆಗೆದುಕೊಳ್ಳಬೇಕಾದರೆ ಇನ್ಸ್​ಪೆಕ್ಟರ್​ ಮಟ್ಟದ ಅಧಿಕಾರಿಗಳಿಗೆ ನಾವು ರಜೆ ಕೊಡುತ್ತೇವೆ ಎಂದಿದ್ದಾರೆ.

ಓದಿ:ಗಂಭೀರ ಕಾಯಿಲೆ ಅಥವಾ ಮನೆಯಲ್ಲಿ ಯಾರಾದರೂ ಮೃತಪಟ್ಟರೆ ಮಾತ್ರ ರಜೆ : ಅಸಮಾಧಾನಕ್ಕೆ‌ ಕಾರಣವಾದ ಡಿಸಿಪಿ‌ ಆದೇಶ

ABOUT THE AUTHOR

...view details