ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಬೆಳವಣಿಗೆ ತೀವ್ರಗೊಳ್ಳುತ್ತಿರುವಾಗಲೇ ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಸಚಿವರೂ ಆಗಿದ್ದ ದಿ.ಅನಂತ್ ಕುಮಾರ್ ಅವರ ಪುತ್ರಿ ವಿಜೇತ ಅನಂತ್ ಕುಮಾರ್ ಕುತೂಹಲಕಾರಿ ಟ್ವೀಟ್ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಜೆಡಿಎಸ್ ಸ್ಟ್ರಾಂಗ್ ಎಂದು ಟ್ಟೀಟ್ ಮಾಡಿರುವ ಅವರು, ರಾಜಕೀಯ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಕರ್ನಾಟಕದ ರಾಜಕೀಯ ನಿಜವಾಗಿಯೂ ಏಕೆ ಆಸಕ್ತಿದಾಯಕವಾಗಿದೆ? ಜೆಡಿಎಸ್ ಇನ್ನೂ ಪ್ರಬಲ ರಾಜಕೀಯ ಶಕ್ತಿಯಾಗಿದೆ ಎಂದು ವಿಜೇತ ಅನಂತಕುಮಾರ್ ಟ್ವೀಟ್ ಮಾಡಿದ್ದಾರೆ.
ತಮ್ಮ ತಾಯಿ ತೇಜಸ್ವಿನಿ ಅನಂತ್ ಕುಮಾರ್ಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಈ ರೀತಿಯಾಗಿ ಅವರು ಟ್ಟೀಟ್ ಮಾಡಿದ್ರಾ? ಎಂಬ ಪ್ರತಿಕ್ರಿಯೆಗಳು ಅವರ ಪೋಸ್ಟ್‌ಗೆ ಬರುತ್ತಿವೆ.
ಜೆಡಿಎಸ್ ಸ್ಟ್ರಾಂಗ್ ಎಂದ ಕೇಂದ್ರ ದಿ. ಅನಂತಕುಮಾರ್ ಪುತ್ರಿ ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ: ಹೆಚ್ಡಿಕೆ
ತೇಜಸ್ವಿನಿ ಅನಂತ್ ಕುಮಾರ್ ಅವರು ನಮ್ಮ ಪಕ್ಷಕ್ಕೆ ಬಂದರೆ ಸರಿಯಾದ ಸ್ಥಾನಮಾನ ಕೊಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷಕ್ಕೆ ಆಹ್ವಾನವಿತ್ತ ಹೆಚ್ಡಿಕೆ ಪಕ್ಷದ ಕಚೇರಿ ಜೆ.ಪಿ ಭವನದಲ್ಲಿ ಇಂದು ಮಧ್ಯಾಹ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ಪಕ್ಷದಲ್ಲಿ ಸರಿಯಾದ ಸ್ಥಾನಮಾನ ಸಿಗಲಿಲ್ಲ. ಹಾಗಾಗಿ, ಅವರು ನಮ್ಮ ಪಕ್ಷಕ್ಕೆ ಬಂದರೆ ತುಂಬಾ ಸಂತೋಷ ಎಂದರು.
ಅನಂತ್ ಕುಮಾರ್ ಅವರ ಪುತ್ರಿ ಜೆಡಿಎಸ್ ಪಕ್ಷದ ಬಗ್ಗೆ ಉತ್ಸಾಹ ತುಂಬುವ ಮಾತನಾಡಿದ್ದಾರೆ. ಜೆಡಿಎಸ್ ಇನ್ನೂ ಸಹ ಕರ್ನಾಟಕದಲ್ಲಿದೆ ಅನ್ನೋದನ್ನು ಅವರು ಹೇಳಿದ್ದಾರೆ. ಅವರ ತಾಯಿ ತಮ್ಮ ಪಕ್ಷಕ್ಕೆ ಬಂದರೆ ಆತ್ಮೀಯವಾಗಿ ಸ್ವಾಗತಿಸುವುದಾಗಿ ಹೇಳಿದರು.