ಬೆಂಗಳೂರು: ಐಟಿಬಿಟಿ ಕೇಂದ್ರವಾದ ಮಹದೇವಪುರ ಕ್ಷೇತ್ರದಲ್ಲಿ ವಾಸಿಸುವ ಅನ್ಯಭಾಷಿಕರಿಗೆ ಕನ್ನಡ ಭಾಷೆಯನ್ನು ಕಲಿಸಲು ಪ್ರತಿದಿನ ಒಂದೊಂದು ಪದಗಳನ್ನು ಅರ್ಥವಾಗುವ ರೀತಿಯಲ್ಲಿ ಹೇಳಿಕೊಡಿ ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದ್ರು.
ಕ್ಷೇತ್ರದ ಹದಗೂರು ಮತ್ತು ಕಾಡುಗೋಡಿ ವಾರ್ಡ್ನಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸೈಕಲ್ ಜಾಥಾದಲ್ಲಿ ಒಂದೊಂದು ವಾರ್ಡಿನಲ್ಲೂ 300ಕ್ಕೂ ಹೆಚ್ಚು ಜನ ಪಾಲ್ಗೊಂಡು, ಕನ್ನಡ ಭಾಷೆಯನ್ನು ಮಾತನಾಡುವಂತೆ ಕನ್ನಡ ನೆಲ, ಜಲ, ಸಂಸ್ಕೃತಿಯನ್ನು ಉಳಿಸುವಂತೆ ಮನವಿ ಮಾಡಿದರು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ, ಈ ಕಾರ್ಯಕ್ರಮದ ಉದ್ದೇಶ'ನಾನ್ ಕನ್ನಡಿಗರು,ನಾವು ಕನ್ನಡಿಗರು' ಆಗಬೇಕು ಎಂಬುದು ಎಂದು ಹೇಳಿದರು. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಭಾಷೆ ಕನ್ನಡ.