ಬೆಂಗಳೂರು: ಬ್ಲ್ಯಾಕ್ ಮ್ಯಾಜಿಕ್ ಮಾಡುತ್ತೇನೆ ಎಂದು ಲಕ್ಷ ಲಕ್ಷ ಹಣ ದೋಖಾ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದ್ದು, ಸದ್ಯ ಸೈಬರ್ ಪೊಲೀಸರು ಆರೋಪಿಗಾಗಿ ಶೋಧ ಮುಂದುವರೆಸಿದ್ದಾರೆ. ತುಷಾರ್ ಪಾಂಡ ಎನ್ನುವ ವ್ಯಕ್ತಿ ಮೊಸಕ್ಕೆ ಒಳಗಾಗಿದ್ದಾರೆ.
ತುಷಾರ್ ಪಾಂಡ ಬ್ಲ್ಯಾಕ್ ಮ್ಯಾಜಿಕ್ಗೋಸ್ಕರ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ. ಈ ವೇಳೆ www.aghori.baba ವೆಬ್ಸೈಟ್ ಸಿಕ್ಕಿದ್ದು, ಇದಕ್ಕೆ ತುಷಾರ್ ಮಸೇಜ್ ಮಾಡಿದ್ದಾರೆ. ಮಸೇಜ್ ಮಾಡಿದ ಕೆಲವೇ ನಿಮಿಷಗಳಲ್ಲಿ 7657890034 ಈ ನಂಬರ್ಗೆ ಕರೆ ಮಾಡಲು ತಿಳಿಸಿದ್ದಾರೆ. ಕರೆ ಮಾಡಿದಾಗ ದೀಪಕ್ ಬಾಬಾ ಎಂದು ಪರಿಚಯ ಮಾಡಿಕೊಂಡ ಆರೋಪಿ ನಿಮ್ಮ ಸಮಸ್ಯೆ ಏನು ಎಂದು ಕೇಳಿದ್ದಾರೆ.
ಆಗ ತುಷಾರ್ ಮನೆಯಲ್ಲಿ ನೆಮ್ಮದಿಯಿಲ್ಲ, ಶಾಂತಿ ಇಲ್ಲ, ಮಾಡಿದ ಯಾವುದೇ ಕೆಲಸ ಸರಿಯಾಗಿ ಆಗುತ್ತಿಲ್ಲ ಎಂದಿದ್ದಾನೆ. ಇದಕ್ಕೆ ನಿಮ್ಮ ಸಮಸ್ಯೆ ಪರಿಹರಿಸುತ್ತೇವೆ ಎಂದಿದ್ದ ಬಾಬಾ, ಸಮಸ್ಯೆ ಬಗೆಹರಿಸಲು ಒಂದು ಪೂಜೆ ಮಾಡಿಸಬೇಕು ಎಂದಿದ್ದಾರೆ. ಇದಕ್ಕೆಲ್ಲಾ ಆಯ್ತು ಎಂದು ಒಪ್ಪಿಕೊಂಡಾಗ ಮೊದಲು ನೀವು ಇಂತಿಷ್ಟು ಹಣ ಪೇ ಮಾಡಿ ಎಂದಿದ್ದಾರೆ.
ಲಕ್ಷ ಲಕ್ಷ ಪೀಕಿದ ಸೈಬರ್ ಬಾಬಾ ಎಷ್ಟು ಹಣ ಪೇ ಮಾಡಬೇಕು ಎಂದು ಕೇಳಿದಾಗ 9.30 ಲಕ್ಷ ರೂ ಹಾಕಿ ಎಂದಿದ್ದಾರೆ. ನಂಬಿಕೆ ಇಟ್ಟು ತುಷಾರ್ ಪಾಂಡ ಹಣ ಹಾಕಿದ್ದು, ಹಣ ಕ್ರೆಡಿಟ್ ಆಗುತ್ತಿದ್ದಂತೆ ಬಾಬಾ ನಂಬರ್ ಸ್ವಿಚ್ ಆಫ್ ಆಗಿದೆ. ಇನ್ನು ಅದೇ ವೆಬ್ಸೈಟ್ ಹೆಲ್ಪ್ ಕೇಳಿದ್ರೆ ನೋ ರೆಸ್ಪಾನ್ಸ್. ಸದ್ಯ ನ್ಯಾಯಕ್ಕಾಗಿ ಆಗ್ನೇಯ ವಿಭಾಗದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಸೈಬರ್ ಖದೀಮರಿಗೆ ಪೊಲೀಸರು ಶೋಧ ಮುಂದುವರೆಸಿದ್ದಾರೆ.