ಬೆಂಗಳೂರು:ಅಡುಗೆ ಪಾತ್ರೆಗಳಲ್ಲಿ ಅಡಗಿಸಿಟ್ಟು ಆಸ್ಟ್ರೇಲಿಯಾಗೆ ಸಾಗಿಸಲಾಗುತ್ತಿದ್ದ ಎಫೆಡ್ರಿನ್ ಮಾದಕ ಪದಾರ್ಥವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಪಾತ್ರೆಗಳಲ್ಲಿ ಬಚ್ಚಿಟ್ಟು ಮಾದಕ ವಸ್ತು ಸಾಗಾಟ: ₹9 ಕೋಟಿಗೂ ಹೆಚ್ಚು ಮೌಲ್ಯದ ಮಾಲು ವಶ
ಬೆಂಗಳೂರಲ್ಲಿ ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್ ಇಂಟೆಲಿಜೆನ್ಸ್ ಅಧಿಕಾರಿಗಳು 9 ಕೋಟಿ ರೂ.ಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರಲ್ಲಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು
ಖಚಿತ ಮಾಹಿತಿ ಮೇರೆಗೆ ತ್ವರಿತ ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್ ಇಂಟೆಲಿಜೆನ್ಸ್, 46.799 ಕೆಜಿ ಎಫೆಡ್ರಿನ್ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ವಿಚಾರವಾದಿ ದಾಭೋಲ್ಕರ್ ಹತ್ಯೆ: ಇಬ್ಬರು ಆರೋಪಿಗಳನ್ನು ಗುರುತಿಸಿದ ಪೌರ ಕಾರ್ಮಿಕ