ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳು ಆನೇಕಲ್(ಬೆಂಗಳೂರು): ಆನೆಗಳ ಹಿಂಡು ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡಿರುವ ಘಟನೆ ತಮಿಳುನಾಡಿನ ಅಕಲಕೋಟೈ ಗ್ರಾಮದಲ್ಲಿ ನಡೆದಿದೆ.
ಆಹಾರ ಅರಸಿ ಕಾಡಿನಿಂದ ನಾಡಿಗೆ ಕಾಡಾನೆಗಳು ಲಗ್ಗೆ ಇಟ್ಟಿವೆ. ತಮಿಳುನಾಡಿನ ದೆನ್ಕನಿಕೊತ್ತೈ ಸಮೀಪದ ಅಕಲಕೋಟೈ ಗ್ರಾಮದ ರೈತರ ಜಮೀನುಗಳಿಗೆ ಹಾಗೂ ನರ್ಸರಿಗೆ ಕಾಡಾನೆಗಳು ನುಗ್ಗಿ ದಾಂಧಲೆ ನಡೆಸಿವೆ.
ಸುಮಾರು 20ಕ್ಕೂ ಹೆಚ್ಚು ಕಾಡಾನೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇನ್ನು, ಜವಳಗಿರಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪಟಾಕಿ ಸಿಡಿಸಿ ಆನೆಗಳನ್ನು ಮರಳಿ ಕಾಡಿಗಟ್ಟಿದ್ದಾರೆ.
ಇದನ್ನೂ ಓದಿ:ಕಾಡಿನಿಂದ ಬಂದ ಆನೆಯೊಂದನ್ನು ಮರಳಿ ಕಾಡಿಗಟ್ಟಿದ ನಾಯಿಗಳು.. ವಿಡಿಯೋ