ಬೆಂಗಳೂರು: ಆಪರೇಷನ್ ಕಮಲದಿಂದ ಬೇಸತ್ತ ಸಿಎಂ ಕುಮಾರಸ್ವಾಮಿ ಹೇಗಾದರೂ ಮಾಡಿ ಸರ್ಕಾರ ಉಳಿಸಲೇಬೇಕು ಅಂತ ಪಣ ತೊಟ್ಟಿದ್ದಾರೆ.
ಅತೃಪ್ತರ ಆಟ, ಸರ್ಕಾರಕ್ಕೆ ಸಂಕಷ್ಟ: ಕಾನೂನಿನ ಮೊರೆ ಹೋಗಲು ಸಿಎಂ ನಿರ್ಧಾರ - operation kamal
ಅತೃಪ್ತರನ್ನು ಸಮಾಧನಪಡಿಸುವುದರಿಂದ ಹಿಡಿದು ಸರ್ಕಾರವನ್ನು ಉಳಿಸಿಕೊಳ್ಳಲು ಇರುವ ಎಲ್ಲಾ ಮಾರ್ಗಗಳನ್ನು ತಿಳಿಯಲು ಸಿಎಂ ಕುಮಾರಸ್ವಾಮಿ ವಕೀಲರ ಜೊತೆ ಮಾತುಕತೆ ನೆಡೆಸಿದ್ದಾರೆಂದು ತಿಳಿದು ಬಂದಿದೆ.
ಹೀಗಾಗಿ ಭಾನುವಾರ ಅಮೆರಿಕದಿಂದ ಬಂದ ಸಿಎಂ ಕಾನೂನಿನ ಮಾರ್ಗ ಅನುಸರಿಸಿ ಹೇಗಾದರೂ ಮಾಡಿ ಸರ್ಕಾರ ಉಳಿಸಿಕೊಳ್ಳಲು, ಅದಕ್ಕೆ ಮುಂದಿನ ಕಾನೂನು ಪ್ರಕ್ರಿಯೆಗಳ ಕುರಿತು ಸರ್ಕಾರಿ ವಕೀಲರ ಜೊತೆ ಮಾತುಕತೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಸರ್ಕಾರ ಉಳಿಸಿಕೊಳ್ಳುವ ಮಾರ್ಗೋಪಾಯ ಹಾಗೂ ಒಂದು ವೇಳೆ ಶಾಸಕರ ರಾಜೀನಾಮೆ ಸಲ್ಲಿಕೆ ಹಿನ್ನಲೆ ಸ್ಪೀಕರ್ ಏನ್ ಮಾಡಬಹುದು? ಕಾನೂನಿನ ಮೂಲಕ ಅತೃಪ್ತರನ್ನ ಕಟ್ಟಿ ಹಾಕುವುದು ಹೇಗೆ? ಪಕ್ಷಾಂತರ ನಿಷೇಧ ಕಾಯ್ದೆ ಏನು ಹೇಳುತ್ತೆ? ಹೀಗೆ ಒಟ್ಟಾರೆಯಾಗಿ ಅತೃಪ್ತರನ್ನು ಸಮಾಧಾನ ಪಡಿಸುವುದರಿಂದ ಹಿಡಿದು ಎಲ್ಲಾ ಮಾರ್ಗಗಳನ್ನು ಸರ್ಕಾರಿ ವಕೀಲರ ಜೊತೆ ಕಾನೂನಾತ್ಮಕವಾಗಿರುವ ದಾರಿಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಗಹನವಾದ ಚರ್ಚೆ ನಡೆಸಿದ್ದಾರೆ.