ಕರ್ನಾಟಕ

karnataka

ETV Bharat / state

Bengaluru Crime: ಮೊಬೈಲ್​ನಲ್ಲಿ ಮಾತನಾಡುತ್ತಾಳೆ ಎಂದು ಪತ್ನಿಗೆ ಚಾಕು ಇರಿದ ಪತಿ - ಈಟಿವಿ ಭಾರತ ಕನ್ನಡ

ಪತ್ನಿ ಮೇಲೆ ಸಂಶಯ ಪಟ್ಟ ಪತಿ ಕುಡಿದ ಮತ್ತಿನಲ್ಲಿ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪತ್ನಿಗೆ ಚಾಕು ಇರಿದ ಪತಿ
ಪತ್ನಿಗೆ ಚಾಕು ಇರಿದ ಪತಿ

By

Published : Jun 26, 2023, 11:47 AM IST

ಬೆಂಗಳೂರು: ಪತ್ನಿ ಮೊಬೈಲ್ ಫೋನ್‌ನಲ್ಲಿ ಹೆಚ್ಚು ಮಾತನಾಡುತ್ತಿರುತ್ತಾಳೆ ಎಂದು ಅನುಮಾನಪಟ್ಟ ಪತಿ ಆಕೆಗೆ ಚಾಕುವಿನಿಂದ ಇರಿದ ಘಟನೆ ಭಾನುವಾರ ರಾತ್ರಿ 9.45ರ ಸುಮಾರಿಗೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಜಾರ್ ಸ್ಟ್ರೀಟ್​ನಲ್ಲಿ ನಡೆದಿದೆ. ಗಂಡ ದಯಾನಂದ್ ಅಲಿಯಾಸ್ ನಂದನ ಕ್ರೌರ್ಯಕ್ಕೆ ಹೆಂಡತಿ‌ ಪ್ರಿಯಾಂಕಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆರೋಪಿ ದಯಾನಂದ್ ಹಾಗೂ ಪ್ರಿಯಾಂಕಾ ಮದುವೆಯಾಗಿ ನೀಲಸಂದ್ರದ ಬಜಾರ್ ಸ್ಟ್ರೀಟ್​ನಲ್ಲಿ ವಾಸವಿದ್ದರು. ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದರು. ಸದಾ ಕುಡಿದು ಬರುತ್ತಿದ್ದ ದಯಾನಂದ್ ಪತ್ನಿ ಮೇಲೆ ಅನುಮಾನ ಪಟ್ಟು ಗಲಾಟೆ ಮಾಡುತ್ತಿದ್ದ. ರಾತ್ರಿಯೂ ಸಹ ಕಂಠಪೂರ್ತಿ ಕುಡಿದು ಬಂದಿದ್ದ ದಯಾನಂದ್ ಮಲಗಿದ್ದ ಪತ್ನಿ ಜೊತೆ ಜಗಳ ಆರಂಭಿಸಿದ್ದ. ನೋಡ ನೋಡುತ್ತಿದ್ದಂತೆ ಮಕ್ಕಳ ಮುಂದೆಯೇ ಅಡುಗೆ ಕೋಣೆಯಲ್ಲಿದ್ದ ಚಾಕು ತೆಗೆದುಕೊಂಡು ಪತ್ನಿಯ ಹೊಟ್ಟೆಯ ಕೆಳಭಾಗಕ್ಕೆ ಇರಿದಿದ್ದ. ತೀವ್ರ ರಕ್ತಸ್ರಾವವಾದಿಂದ ಪತ್ನಿ ಕಿರುಚಾಡುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದ.

ಕಿರುಚಾಟ ಕೇಳಿದ ಸ್ಥಳೀಯರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಪ್ರಿಯಾಂಕಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಪ್ರಿಯಾಂಕಾ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಮುಂದುವರೆದಿದೆ. ಆರೋಪಿ ದಯಾನಂದ್ ನನ್ನು ಬಂಧಿಸಿರುವ ಆಡುಗೋಡಿ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್​​ ಮೂಲಗಳು ತಿಳಿಸಿವೆ.

ಪತ್ನಿ ಸರಿಯಿಲ್ಲ ಎಂದು ಚಾಕು ಇರಿದಿದ್ದ ಪತಿ:ಪತ್ನಿ ಸರಿಯಿಲ್ಲ ಎಂದು ಹಾಡ ಹಗಲೇ ಪತಿಯೇ ಆಕೆಗೆ ಚಾಕು ಇರಿದಿರುವ ಘಟನೆ ಇದೇ ಜೂನ್ 21ರಂದು ಸಂಜೆ ಬಾಣಸವಾಡಿಯ ಸೆಂಟ್ ಜೋಸೆಫ್ ಚರ್ಚ್ ಬಳಿ ನಡೆದಿತ್ತು. ನಿಖಿತಾ ಎಂಬಾಕೆ ತನ್ನ ಗಂಡ ದಿವಾಕರ್ ನಿಂದ ಚಾಕು ಇರಿತಕ್ಕೊಳಗಾಗಿದ್ದರು. ಚಾಕು ಇರಿದಿದ್ದ ದಿವಾಕರ್ ಹಾಗೂ ಕೃತ್ಯಕ್ಕೆ ಸಾಥ್ ನೀಡಿದ್ದ ಆತನ ಚಿಕ್ಕಪ್ಪನ ಮಗ ಪ್ರತೀಭ್​ ನನ್ನ ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದರು.

ವಿವಾಹೇತರ ಸಂಬಂಧ ಮಹಿಳೆಗೆ ಇರಿದು ಆತ್ಮಹತ್ಯೆಗೆ ಯವಕ ಯತ್ನ:ಎರಡು ದಿನಗಳ ಹಿಂದಷ್ಟೇಬೆಂಗಳೂರಿನ ಆನೇಕಲ್​ ಪಟ್ಟಣದಲ್ಲಿ ಯುವಕನೊಬ್ಬ ಮಹಿಳೆ ಕುತ್ತಿಗೆಗೆ ಇರಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿತ್ತು. 2 ವರ್ಷಗಳಿಂದ ಮಹಿಳೆ ಮತ್ತು ಯುವಕ ಬಟ್ಟೆ ಮಳಿಗೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಮಹಿಳೆಗೆ ಮೊದಲೇ ವಿವಾಹವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಈ ವಿಚಾರ ತಿಳಿದಿದ್ದರೂ ಇಬ್ಬರ ಮಧ್ಯೆ ಸ್ನೇಹ ಬೆಳೆದು ವಿವಾಹೇತರ ಸಂಬಂಧ ಏರ್ಪಟ್ಟಿತ್ತು. ಈ ವಿಷಯ ಮನೆಯವರಿಗೆ ತಿಳಿದು ಪೊಲೀಸರ ಮೂಲಕ ರಾಜಿ ಸಂಧಾನವಾಗಿತ್ತು. ಇದರಿಂದ ಯುವಕ 2 ದಿನಗಳ ಹಿಂದೆ ವಿಷ ಕುಡಿದು ಆಸ್ಪತ್ರೆಯಲ್ಲಿ ದಾಖಲಾಗಿದ್ದ, ಅಲ್ಲಿಂದ ಮಹಿಳೆ ಮನೆಗೆ ಬಂದು ಕತ್ತರಿ ಮೂಲಕ ಆಕೆಯ ಕುತ್ತಿಗೆಗೆ ಇರಿದಿದ್ದ.

ಇದನ್ನೂ ಓದಿ:ಯುವತಿ ಕುತ್ತಿಗೆಯಿಂದ ಸರ ಕದಿಯುವಲ್ಲಿ ವಿಫಲ.. ಮಾರಾಕಾಸ್ತ್ರ ತೋರಿಸಿ ಪರಾರಿಯಾದ ಸರಗಳ್ಳ- ವಿಡಿಯೋದಲ್ಲಿ ಸೆರೆ

ABOUT THE AUTHOR

...view details