ಬೆಂಗಳೂರು: ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಬೆನ್ನತ್ತಿರುವ ಸಿಸಿಬಿ ದಿನಕ್ಕೊಬ್ಬರನ್ನ ಬಲರಗೆ ಬೀಳಿಸುತ್ತಿದೆ. ನಿನ್ನೆ ಕೂಡ ಕಾರ್ಯಾಚರಣೆಗೆ ಇಳಿದ ಸಿಸಿಬಿ ತಂಡ ಭಾರತ-ಬಾಂಗ್ಲಾದೇಶ ನಡುವಿನ ಟಿ-20 ಮ್ಯಾಚ್ ಮೇಲೆ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಆರೋಪಿಯನ್ನು ಬಂಧಿಸಿದೆ.
ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಓರ್ವನ ಬಂಧನ - ಕ್ರಿಕೆಟ್ ಬೆಟ್ಟಿಂಗ್ ಆರೋಪಿಯ ಬಂಧನ
ಭಾರತ -ಬಾಂಗ್ಲಾದೇಶ ನಡುವಿನ ಟಿ-20 ಮ್ಯಾಚ್ ಮೇಲೆ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ದಂಧೆ
ರೋಹಿತ್ ಕುಮಾರ್ ಬಂಧಿತ ಆರೋಪಿ. ನಿನ್ನೆ ನಡೆದ ಭಾರತ-ಬಾಂಗ್ಲಾದೇಶ ನಡುವಿನ ಟಿ-20 ಮ್ಯಾಚ್ ಮೇಲೆ ಹಲವಾರು ಮಂದಿಯನ್ನ ಗುಂಪಾಗಿಸಿಕೊಂಡು ರೋಹಿತ್ ಕುಮಾರ್ ಬೆಟ್ಟಿಂಗ್ ಆಡುತ್ತಿದ್ದ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, 3,36,500 ರೂಪಾಯಿ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.