Karnataka Covid update : ರಾಜ್ಯದಲ್ಲಿ ಹಳ್ಳಿ ಹಳ್ಳಿಗಳಿಗೂ ಆವರಿಸಿದ ಕೋವಿಡ್ ಸೋಂಕು - ಕರ್ನಾಟಕದ ಹಳ್ಳಿ ಹಳ್ಳಿಗಳಿಗೂ ಹರಡಿದ ಕೋವಿಡ್
ರಾಜ್ಯದಲ್ಲಿ ಹಳ್ಳಿ ಹಳ್ಳಿಗಳಿಗೂ ಕೋವಿಡ್ ಸೋಂಕು ಆವರಿಸಿದೆ. ಡೇಂಜರ್ ಹಂತದಲ್ಲಿರುವ ರಾಜ್ಯದ ಟಾಪ್ 20 ಹಳ್ಳಿಗಳು ಮತ್ತು ದಾಖಲಾದ ಪ್ರಕರಣಗಳ ವಿವರ ಹೀಗಿದೆ..
ಸಾಂದರ್ಭಿಕ ಚಿತ್ರ
By
Published : Jan 16, 2022, 11:57 AM IST
ಬೆಂಗಳೂರು :ರಾಜ್ಯದಲ್ಲಿ ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಜನಸಂದಣಿ ತಪ್ಪಿಸಲು ಸರ್ಕಾರ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮೊರೆ ಹೋಗಿದೆ. ಇತ್ತ ನಗರದಲ್ಲಿ ಹೆಚ್ಚುತ್ತಿರುವ ಸೋಂಕು ಹಳ್ಳಿಗಳಿಗೂ ಆವರಿಸಿದ್ದು, ಆತಂಕ ಹೆಚ್ಚಿಸಿದೆ. 3ನೇ ಅಲೆಗೆ ನಗರ ಪಟ್ಟಣಗಳ ಜತೆ ಹಳ್ಳಿಗಳು ತತ್ತರಿಸುತ್ತಿವೆ.
ರಾಜ್ಯದ ಟಾಪ್ 20 ಹಳ್ಳಿಗಳು ಮತ್ತು ದಾಖಲಾದ ಕೋವಿಡ್ ಪ್ರಕರಣಗಳ ವಿವರ
ಈಗಾಗಲೇ ರಾಜ್ಯದಲ್ಲಿ ನಿತ್ಯ ಪಾಸಿಟಿವ್ ಕೇಸ್ 30 ಸಾವಿರ ದಾಟಿವೆ. ಕೆಲವೊಂದು ನಗರ, ಪಟ್ಟಣಗಳ ಜತೆ ಸೇಫ್ ಇದ್ದ ಹಲವು ಹಳ್ಳಿಗಳು ಇದೀಗ ಡೇಂಜರ್ ಝೋನ್ ತಲುಪಿವೆ.
ರಾಜ್ಯದ 30 ಜಿಲ್ಲೆಗಳ ಹಳ್ಳಿಗಳ ಪೈಕಿ 282 ಹಳ್ಳಿಗಳಲ್ಲಿ ನಿತ್ಯ ಸೋಂಕು ಹೆಚ್ಚಳವಾಗುತ್ತಿದೆ. ಕಳೆದ ನಾಲ್ಕು ವಾರಗಳಿಂದ ಸೋಂಕಿತರ ಸಂಖ್ಯೆ ನಿರಂತರ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ 274 ನಗರ-ಪಟ್ಟಣಗಳಿವೆ. 148 ನಗರ-ಪಟ್ಟಣಗಳಲ್ಲಿ ಸೋಂಕು ಏರಿಕೆಯಾಗಿದೆ. 282 ಹಳ್ಳಿಗಳು ಹಾಗೂ 148 ನಗರ ಪಟ್ಟಣಗಳಲ್ಲಿ ಸೋಂಕಿನ ಆರ್ಭಟ ಹೆಚ್ಚಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಡೇಂಜರ್ ಹಂತದಲ್ಲಿರುವ ರಾಜ್ಯದ ಟಾಪ್ 20 ಹಳ್ಳಿಗಳು ಮತ್ತು ದಾಖಲಾದ ಪ್ರಕರಣಗಳು