ಬೆಂಗಳೂರು: ನಗರದಲ್ಲಿ ಸರ್ಕಾರಿ ಕೋಟಾದ ಹಾಸಿಗೆಗಳ ಲಭ್ಯತೆ ಬಗ್ಗೆ ಲೈವ್ ಮಾಹಿತಿ ನೀಡುತ್ತಿದ್ದ ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಂನ ಆನ್ಲೈನ್ ಪೋರ್ಟಲ್ ಸಾರ್ವಜನಿಕರಿಗೆ ನಿಷೇಧಿಸಲಾಗಿದೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರೇ ಟ್ವೀಟ್ ಮಾಡಿದ್ದು, ನಗರದಲ್ಲಿ ಬೆಡ್ಗಳ ಲಭ್ಯತೆ ನೋಡಿದ್ರೆ ಗಾಬರಿ ಹುಟ್ಟಿಸುವಂತಿದೆ.
ಸರ್ಕಾರಿ ಆಸ್ಪತ್ರೆ, ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಒಂದೇ ಒಂದು ಐಸಿಯು, ವೆಂಟಿಲೇಟರ್ ಬೆಡ್ಗಳು ಖಾಲಿ ಇಲ್ಲ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ 23 ಐಸಿಯು, 10 ವೆಂಟಿಲೇಟರ್ಗಳಿದ್ದು, ಇದೂ ಕೂಡ ಸಾಮಾನ್ಯ ಜನರಿಗೆ ಸಿಗುತ್ತಿಲ್ಲ. 1912 ಹೆಲ್ಪ್ ಲೈನ್ಗಳು ಜನರ ಸಹಾಯಕ್ಕೆ ಬರುತ್ತಿಲ್ಲ. ಐಸಿಯು ಬೆಡ್ ಕೇಳಿಕೊಂಡು ಈ ಸಹಾಯವಾಣಿಗೆ ಕರೆ ಮಾಡಿದ್ರೆ ಎರಡ್ಮೂರು ದಿನಗಳ ಬಳಿಕ ವಾಪಸ್ ಫೋನ್ ಮಾಡಿ ಬೆಡ್ ಲಭ್ಯತೆ ಬಗ್ಗೆ ತಿಳಿಸುವ ಪರಿಸ್ಥಿತಿ ಬಂದಿದೆ. ಒಂದು ದಿನದಲ್ಲಿ ಇಡೀ ನಗರದಲ್ಲಿ 100 ಐಸಿಯು ಬೆಡ್ ಕೂಡ ಲಭ್ಯವಾಗುತ್ತಿಲ್ಲ. ವೆಂಟಿಲೇಟರ್, ಐಸಿಯು ಬೆಡ್ ಸಮಸ್ಯೆ ತೀವ್ರವಾಗಿದೆ ಎಂದು ಬಿಬಿಎಂಪಿ ಜಂಟಿ ಆಯುಕ್ತರೊಬ್ಬರು ಮಾಹಿತಿ ನೀಡಿದ್ದಾರೆ.
ನಗರದಲ್ಲಿರುವ 9,517 ಬೆಡ್ಗಳ ಪೈಕಿ, 2,273 ಸಾಮಾನ್ಯ ಬೆಡ್ಗಳು ಖಾಲಿ ಇವೆ. ಆಮ್ಲಜನಕ ಅಗತ್ಯ ಇರುವ ಗಂಭೀರ ಸ್ಥಿತಿಯ ರೋಗಿಗಳು ಚಿಕಿತ್ಸೆ ಸಿಗದೆ ಮೃತಪಡುತ್ತಿದ್ದಾರೆ. ಆಮ್ಲಜನಕದ ಕೊರತೆಯಿಂದ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವಂತಾಗಿದೆ.
ಐಸಿಯು ಬೆಡ್ ಹೆಚ್ಚಳಕ್ಕೆ ಕ್ರಮ: ಗೌರವ್ ಗುಪ್ತಾ